ಮಹಾನಗರ ಪಾಲಿಕೆ 9ನೇ ವಾರ್ಡ್ ಸದಸ್ಯರಾದ ಶ್ರೀಮತಿ ಹೆಚ್ ಗೌರಮ್ಮ ಇವರಿಗೆ ಗೌರವ ಸಮರ್ಪಣೆ
ದಾವಣಗೆರೆ ಸೆ.12
ಆದರ್ಶ ಯೋಗ ಪ್ರತಿಷ್ಠಾನ (ರಿ.) ದಾವಣಗೆರೆ ವತಿಯಿಂದ ಇತ್ತೀಚೆಗೆ ನಗರದ ದೇವರಾಜ ಅರಸ್ ಬಡಾವಣೆಯ ಸಿ ಬ್ಲಾಕ್ ನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹಾಮಾಯಿ ವಿಶ್ವ ಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರ ದ ಲೋಕಾರ್ಪಣಾಾ ಸಮಾರಂಭದ ಸುಸಂದರ್ಭದಲ್ಲಿ ಮಹಾನಗರ ಪಾಲಿಕೆಯ 9ನೇ ವಾರ್ಡ್ ನ ಸದಸ್ಯರಾದ ಶ್ರೀಮತಿ ಹೆಚ್. ಗೌರಮ್ಮ ಹಾಗೂ ವರ್ತಕ ಹೆಚ್. ಎನ್ ಚಂದ್ರಪ್ಪ ಇವರನ್ನು ವಾರ್ಡ್ ನ ಸರ್ವ ನಾಗರಿಕರ ಪರವಾಗಿ ಸನ್ಮಾನಿಸಿ ಗೌರವ ಸಮರ್ಪಣೆ ಅರ್ಪಿಸಲಾಯಿತು, ಸಮಾರಂಭದಲ್ಲಿ ಶ್ರೀಕ್ಷೇತ್ರ ಆವರಗೊಳ್ಳ ಪುರವರ್ಗದ ಪೂಜ್ಯ ಶ್ರೀ ಷ|| ಬ್ರ|| ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು, ಶಿವಯೋಗಶ್ರಮ ವಿರಕ್ತಮಠದ ಪೂಜ್ಯ ಶ್ರೀ ಬಸವಪ್ರಭು ಮಹಾಸ್ವಾಮಿಗಳು, ಮೈಸೂರಿನ ಗೋ ಸಾಯಿ ಸೇವಾ ಟ್ರಸ್ಟ್ ನ ಸಂಸ್ಥಾಪಕ ಪೂಜ್ಯ ಶ್ರೀ ನಾರಾಯಣ ಸ್ವಾಮೀಜಿ , ಪುತ್ತೂರಿನ ಹಿರಿಯ ಯೋಗ ಚಿಕಿತ್ಸಾ ತಜ್ಞ ಕರುಣಾಕರ್ ಜೀ, ಪಾಲಿಕೆಯ ಸದಸ್ಯ ದಿನೇಶ್ ಕೆ ಶೆಟ್ಟಿ, ಹಿರಿಯ ನ್ಯಾಯವಾದಿ ಎ.ಎಂ ಹೆಗ್ಡೆ, ಸನ್ನದು ಲೆಕ್ಕ ಪರಿಶೋಧಕ ಎನ್.ಜಿ. ಗಿರೀಶ್ ನಾಡಿಗ್, ಪ್ರತಿಷ್ಠಾನದ ಯೋಗಗುರು ಡಾ|| ರಾಘವೇಂದ್ರ ಗುರೂಜಿ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment