ದಾವಣಗೆರೆ. ಡಿ.೦೨
ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಯೋಗಶಾಸ್ತ್ರವನ್ನು ಅಭ್ಯಾಸ ಮಾಡುವುದರಿಂದ ತಮ್ಮಲ್ಲೇ ಹುದುಗಿರುವ ಆಂತರಿಕ ಶಕ್ತಿಯಾದ ಮೇಧಾ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಬಹುದು ಎಂದು ಆದರ್ಶ ಯೋಗ ಪ್ರತಿಷ್ಠಾನ (ರಿ). ದಾವಣಗೆರೆಯ ಯೋಗಗುರು ಡಾ.ರಾಘವೇಂದ್ರ ಗುರೂಜಿ ಹೇಳಿದರು.
ಅವರು ಇಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವ್ರದ್ದಿ ಇಲಾಖೆ ಚಿಕ್ಕಮಗಳೂರು, ಸಹರಾ ಸಂಸ್ಥೆ ಶೃಂಗೇರಿ ಇವರ ಸಂಯುಕ್ತಾಶ್ರಯದಲ್ಲಿ ಶೃಂಗೇರಿ ತಾಲ್ಲೂಕು ಮಟ್ಟದ ಮಕ್ಕಳಿಗಾಗಿ ಏರ್ಪಡಿಸಿದ ಕಾವ್ಯಕಮ್ಮಟ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು.
ಪ್ರಕೃತಿ ಮತ್ತು ಮನುಷ್ಯನ ನಡುವೆ ಹೇಗೆ ಅವಿನಾಭಾವ ಸಂಬಂಧವಿದೆಯೋ ಹಾಗೆಯೇ ಶರೀರ ಮತ್ತು ಮನಸ್ಸಿನ ನಡುವೆಯೂ ಅತ್ಯಂತ ನಿಕಟವಾದ ಸಂಬಂಧವಿದೆ. ಜಡವಾದ ಶರೀರ, ಚಂಚಲವಾದ ಮನಸ್ಸು ಇವೆರಡನ್ನು ಒಂದುಗೂಡಿಸಿ ತಮ್ಮಲ್ಲಿರುವ ಮೇಧಾ ಶಕ್ತಿಯನ್ನು ದ್ಡಿಗುಣಗೊಳಿಸಿ ಶ್ಶೆಕ್ಷಣಿಕ ಮಟ್ಟದಲ್ಲಿ ವಿಕಾಸ ಹೊಂದಲು ಯೋಗಾಭ್ಯಾಸವು ಅತ್ಯಂತ ಸಹಾಕಾರಿಯಾಗಿದೆ. ಕಾವ್ಯಕಮ್ಮಟದಲ್ಲಿ ಭಾಗವಹಿಸಿದ ಶಾಲಾ ಮಕ್ಕಳಿಗೆ ಮೇಧಾಶಕ್ತಿ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸಿ ಏಕಾಗ್ರತೆಯನ್ನು ಪಡೆಯುವ ಅನೇಕ ಸರಳ ವಿಧಾನಗಳನ್ನು ಪ್ರಾತ್ಯಕ್ಷಿಕಯ ಮೂಲಕ ತಿಳಿಸಿ ಅಭ್ಯಾಸ ಮಾಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶೃಂಗೇರಿ ಅರಕ್ಷಕ ಇಲಾಖೆಯ ವೃತ್ತನಿರೀಕ್ಷಕರಾದ ಸುಧೀರ ಎಂ ಹೆಗಡೆ ಮಾತನಾಡಿ ಮಕ್ಕಳನ್ನು ಚಿಕ್ಕವಯಸ್ಸಿನಲ್ಲಿಯೇ ತಂದೆ ತಾಯಂದಿರು ಅತ್ಯಂತ ಜವಾಬ್ದಾರಿಯಿಂದ ಬೆಳಸುವುದರ ಜೊತೆಗೆ ಉತ್ತಮ ಸಂಸ್ಕಾರವನ್ನು ಕೊಡಬೇಕು. ಅಲ್ಲದೆ ಮಕ್ಕಳು ತಮ್ಮ ಶ್ಶೆಕ್ಷಣಿಕ ಮಟ್ಟದಲ್ಲಿಯೇ ಭವಿಷ್ಯದ ಗುರಿಯನ್ನು ಹೊಂದಿರಬೇಕು. ತಮಗಿಷ್ಟವಾದ ಕ್ಷೇತ್ರದಲ್ಲಿ ಮುಂದುವರಿಯಲು ಸೂಕ್ತವಾದ ಶಿಕ್ಷಣ ಮಾಧ್ಯಮವನ್ನು ಆಯ್ಕೆಮಾಡಿ ಅದರಲ್ಲಿ ಸಾಧನೆಯ ಗುರಿಯನ್ನು ಹೊಂದಬೇಕು ಎಂದು ತಿಳಿಸುತ್ತ ತಮ್ಮ ಬಾಲ್ಯದ ವಿದ್ಯಾರ್ಥಿ ದಿನಗಳನ್ನು ನೆನೆದು ಪೋಲೀಸ್ ಅಧಿಕಾರಿಯಾದ ಬಗೆಯನ್ನು ಮಕ್ಕಳಿಗೆ ಮನ ಮುಟ್ಟುವಂತೆ ಕೆಲವು ನೈಜ ಘಟನೆಗಳನ್ನು ಸಹ ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿ ಶೃಂಗೇರಿಯ ಕಲಾವಿದ ರಮೇಶ್ ಬೇಗಾರ್ ಮಾತನಾಡಿ ಕಲೆಯನ್ನು ರೂಡಿಸಿಕೊಂಡಾಗ ಮಕ್ಕಳ ಮನಸ್ಸಿನ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಹಾಗೂ ಅದರ ಲಾಭಗಳನ್ನು ತಿಳಿಸಿ ಕೊಟ್ಟರು.
ಸಹರಾ ಸಂಸ್ಥೆಯ ಮುಕ್ಯಸ್ತ ಡಾ.ಉಮೇಶ್ ರವರು ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಪ್ತ ಸಹಾಯಕಿ ಭವ್ಯ ಎಲ್ಲರನ್ನು ಸ್ವಾಗತಿಸಿ ನಿರೂಪಿಸಿದರು. ಸಂಸ್ಥೆಯ ಕಾರ್ಯಕರ್ತೆ ರಮ್ಯಾ ಎಲ್ಲರನ್ನೂ ವಂದಿಸಿದರು. ಕೊನೆಯಲ್ಲಿ ಶಾಲಾ ಮಕ್ಕಳಿಗೆ ಪ್ರಶಸ್ತಿಪತ್ರವನ್ನು ವಿತರಿಸಲಾಯಿತು. ಹಿರಿಯರಾದ ಮುದೇನೂರಿನ ರಾಜಶೇಖರ ಕರೇಗೌಡ, ವೀಣಾ ಮತ್ತು ಸಂದೇಶ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

No comments:
Post a Comment