Sunday, February 17, 2013

ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮಾನಸಿಕ ಸ್ಥಿರತೆ ಬಹುಮುಖ್ಯ

ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮಾನಸಿಕ ಸ್ಥಿರತೆ ಬಹುಮುಖ್ಯ
-ಡಾ|| ರಾಘವೇಂದ್ರ ಗುರೂಜಿ
ದಾವಣಗೆರೆ ಫೆ. 17



ಇಂದು ಪ್ರತಿಯೊಬ್ಬರಲ್ಲಿಯೂ ಮಾನಸಿಕ ಸ್ಥಿರತೆಯ ಕೊರತೆಯಿದೆ. ಚಂಚಲವಾದ ಮನಸ್ಸನ್ನು ಹತೋಟಿಗೆ ತರುವುದು ಸುಲಭದ ಮಾತಲ್ಲ, ತನ್ನಲ್ಲಿರುವ ಅಂತಃಶಕ್ತಿಯನ್ನು ಜಾಗೃತಗೊಳಿಸಿ ಮಾನಸಿಕ ಸ್ಥಿರತೆಯನ್ನು ಹೊಂದಿಸಿಕೊಂಡಾಗ ಮಾತ್ರ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿದೆ ಎಂದು ಯೋಗಗುರು ಡಾ|| ರಾಘವೇಂದ್ರ ಗುರೂಜಿ ತಿಳಿಸಿದರು.

ಅವರು ಇಂದು ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಪದವಿ ಮಹಾ ವಿದ್ಯಾಲಯದಲ್ಲಿ ರಥಸಪ್ತಮಿಯ ಪ್ರಯುಕ್ತ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ 'ಮನಃಶಕ್ತಿಯ ವರ್ಧನೆ ಹಾಗು ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮಾನಸಿಕ ಸಿದ್ಧತೆ' ಎಂಬ ಕಾಯರ್ಾಗಾರವನ್ನು ಉದ್ಘಾಟಿಸಿ ಉಪನ್ಯಾಸ ನೀಡಿದರು.

ಮನುಷ್ಯ ಉತ್ತಮ ನಾಗರಿಕನಾಗಬೇಕಾದರೆ ತನ್ನ ಜೀವನ ಶೈಲಿಯಲ್ಲಿ ಕೆಲವು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಇದು ಮನಃಶಕ್ತಿಯ ಸಂಕಲ್ಪದಿಂದ ಮಾತ್ರ ಸಾಧ್ಯ ನಮ್ಮ ಎಲ್ಲಾ ಆಗು ಹೋಗುಗಳಿಗೆ ಮನಸ್ಸೇ ಮೂಲ ಕಾರಣ. ಆಂಗ್ಲ ಭಾಷೆಯಲ್ಲಿ ಹೇಳುವಂತೆ 'Bending Of the Mind is More importent then Bending Of the Body'ಎಂಬಂತೆ ದೇಹ ಬಾಗಿಸುವುದಕ್ಕಿಂತಲೂ ಮುಖ್ಯವಾಗಿ ಮನಸ್ಸನ್ನು ಬಾಗಿಸಬೇಕು, ಸದಾ ಸಕಾರಾತ್ಮಕ ಚಿಂತನೆಯಿಂದ ಭಯವನ್ನು ದೂರಮಾಡಿ ಧೈರ್ಯದಿಂದ ಮುನ್ನುಗ್ಗಿದರೆ ಯಶಸ್ಸು ಕಾಣಬಹುದು ಎಂದರಲ್ಲದೆ ಮನಸ್ಸು ಮತ್ತು ಶರೀರಕ್ಕೆ ಇರುವ ಅವಿನಾಭಾವ ಸಂಭಂಧಗಳೊಂದಿಗೆ ಚಟುವಟಿಕೆ ಮೂಡಿಸುವ ಹಲವು ಕೌಶಲ್ಯಗಳ ಮೂಲಕ ಮನಸ್ಸನ್ನು ಶಾಂತಗೊಳಿಸುವ, ಉದ್ವೇಗ ದೂರಮಾಡುವ ವಿಧಾನಗಳನ್ನು ತಿಳಿಸಿಕೊಟ್ಟರು.

ನಂತರ ಬಾಪೂಜಿ ಹೈಟೆಕ್ ಕಾಲೇಜಿನ ಗಣಕಯಂತ್ರ ಪ್ರೊ|| ಮುನೋಳಿ ಮಠ್ ಹಾಗು ಕೆ.ಎಸ್ ಬಕ್ಕೇಶ್ ಇವರುಗಳು 'ಸ್ಪಧರ್ಾತ್ಮಕ ಪರೀಕ್ಷೆಗಳ ಪೂರ್ವಸಿದ್ಧತೆ ಹಾಗು ಭಾಷಾ ವ್ಯವಹಾರಿಕ ಕೌಶಲ್ಯಗಳು' ಎಂಬ ವಿಷಯವಾಗಿ ಮಾತನಾಡಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಕುಸುಮದೇವಿ ಸಜ್ಜನ್ ಉಪಸ್ಥಿತರಿದ್ದರು. 

ಪ್ರಾರಂಭದಲ್ಲಿ ಕು|| ಅರುಂಧತಿ ಪ್ರಾತಿಸಿದರು, ಕಾರ್ಯಕ್ರಮದ ಮುಖ್ಯ ರುವಾರಿ ಪ್ರಭಾರಿ ಪ್ರೊ|| ಆಲೂರು ನಾಗರಾಜ್ ಪ್ರಾಸ್ತಾವಿಕ ನುಡಿಯೊಂದಿಗೆ ಎಲ್ಲರನ್ನು ಸ್ವಾಗತಿಸಿದರು, ಕೊನೆಯಲ್ಲಿ ಡಾ|| ಎನ್.ಜಗನ್ನಾಥ ಎಲ್ಲರಿಗೂ ವಂದಿಸಿ, ಅತಿಥಿಗಳಿಗೆ ಶಾಲು ಹೊದಿಸಿ ಗೌರವಿಸಿದರು. ಪ್ರೊ|| ಬಿ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಸಿಬ್ಬಂದಿ ವರ್ಗ ಹಾಗು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

No comments:

Post a Comment