ತ್ರಿಕರಣ ಶುದ್ಧಿಯು ಅಷ್ಟಾಂಗ ಯೋಗದ
ಮೂಲ ತತ್ತ್ವ
- ಡಾ|| ರಾಘವೇಂದ್ರ ಗುರೂಜಿ
ದಾವಣಗೆರೆ ಆ ೧೪
ಮಾಡುವ ಕೆಲಸದಲ್ಲಿ, ಮಾತನಾಡುವ ನಾಲಿಗೆಯಲ್ಲಿ, ನೋಡುವ ಮನಸ್ಥಿತಿಯ ನೋಟದಲ್ಲಿ ಶುದ್ಧತೆ, ಬದ್ಧತೆ, ಪ್ರಾಮಾಣಿಕತೆ, ಪರೋಪಕಾರಿ ಮನೋಭಾವಗಳಿಂದ ಕೂಡಿದ ಕಾಯ ವಾಚಾ ಮನಸ
ಇವುಗಳಿಂದ ಕೂಡಿದ ತ್ರಿಕರಣ ಶುದ್ಧಿಯು ಅಷ್ಟಾಂಗ ಯೋಗದ ಮೂಲ ತತ್ವವಾಗಿದೆ ಎಂದು ಆದರ್ಶ ಯೋಗ ಪ್ರತಿಷ್ಠಾನದ
ಯೋಗ ಗುರು ಡಾ|| ರಾಘವೇಂದ್ರ ಗುರೂಜಿ ತಿಳಿಸಿದರು.
ಅವರು ಇತ್ತೀಚೆಗೆ ಕಂಚೀಕೆರೆ ಶ್ರೀ ಕೋಡೀ ಸಿದ್ಧೇಶ್ವರ ದೇವಸ್ಥಾನದಲ್ಲಿ
ಜಿಲ್ಲಾ ಆಯುಷ್ ಇಲಾಖೆ ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆ ದಾವಣಗೆರೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ
ಶಾಲಾ ಶಿಕ್ಷಕರಿಗೆ ಯೋಗ ಪ್ರಶಿಕ್ಷಣ ಕಾರ್ಯಾಗಾರದಲ್ಲಿ ಅಷ್ಟಾಂಗ ಯೋಗ ಎಂಬ ವಿಷಯದ ಕುರಿತು ಉಪನ್ಯಾಸ
ಮಂಡಿಸಿದರು.
ಅಷ್ಟಾಂಗ ಯೋಗವು ಮನುಷ್ಯನ ಬಹಿರಂಗ ಮತ್ತು ಅಂತರಂಗಗಳ ಶುದ್ಧಿಯನ್ನು
ತಿಳಿಸುವ ಅಂಶಗಳ ಜೊತೆಗೆ ಶರೀರ ಮತ್ತು ಮನಸ್ಸಿನ ಸಮತೋಲನವನ್ನು ಸಾಧಿಸಲು ಬೇಕಾಗುವ ಮೂಲ ತತ್ತ್ವಾಂಶಗಳನ್ನು
ನಮಗೆ ತಿಳಿಸಿಕೊಡುವುದರ ಜೊತೆಗೆ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಯಮ, ನಿಯಮ, ಆಸನ,
ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ,
ಧ್ಯಾನ, ಸಮಾಧಿ ಇವುಗಳ ಸಂಕ್ಷಿಪ್ತ ಪರಿಚಯವನ್ನು ತಿಳಿಸಿಕೊಟ್ಟರು.
ಹಾಗು ಷಟ್ಚಕ್ರಗಳು ಮತ್ತು ಧ್ಯಾನದ ಪರಿಚಯದೊಂದಿಗೆ ಧ್ಯಾನ
ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಕಾರ್ಯಾಗಾರದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮುಖ್ಯಸ್ಥ ರಾಘವೇಂದ್ರ
ಪ್ರಭು ಎಲ್ಲರನ್ನೂ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ತಪೋವನದ ಡಾ|| ವಿನಂiiಕ ಅಂಬರ್ಕರ್ ಮತ್ತು ಡಾ|| ಸುರೇಂದ್ರ,
ಡಾ|| ಶ್ವೇತ, ಡಾ||
ನಾಗರಾಜ್ ಹೊಸಮನಿ, ಡಾ|| ಶಿವಕುಮಾರ್,
ಡಾ|| ಸುಚಿತ್ರ ಹಾಗು ಆಯುಷ್ ಇಲಾಖೆಯ ಡಾ|| ಯು ಸಿದ್ಧೇಶ್ರವರು ಉಪಸ್ಥಿತರಿದ್ದರು
No comments:
Post a Comment