Wednesday, August 15, 2012

Jaganath Achari


ಅದ್ಭುತ ಮುಖವರ್ಣಿಕೆಯೊಂದಿಗೆ ರಾಕ್ಷಸರೂಪವನ್ನು ಅನಾವರಣಗೊಳಿಸಿದ ಹಿರಿಯ ಕಲಾವಿದ ಜಗನ್ನಾಥ ಆಚಾರಿ ಯಳ್ಳಂಪಳ್ಳಿ


ಆದರ್ಶ ಯೋಗ ಪ್ರತಿಷ್ಠಾನದ ವತಿಯಿಂದ ಮಲ್ಲಾಡಿಹಳ್ಳಿ ಪರಮಪೂಜ್ಯ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿ ಸಂಸ್ಮರಣೆ ನಿಮಿತ್ತ ೧೬ನೇ ವಾರ್ಷಿಕ ಉಚಿತ ಚೈತನ್ಯ ಯೋಗ ಶಿಬಿರದ ಸಮಾರೋಪ ಸಮಾರಂಭ, ೨೦೧೨ ಪ್ರತಿಷ್ಟಿತ ತಿರುಕ ಶ್ರೀ ರಾಜ್ಯ ಗೌರವ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅಂತರ್ರಾಷ್ಟ್ರೀಯ ಪ್ರಸಿದ್ಧ ಯಕ್ಷಗಾನ ಬಣ್ಣದ ವೇಷದ ಕಲಾವಿದರಾದ ಜಗನ್ನಾಥ ಆಚಾರಿ, ಯಳ್ಳಂಪಳ್ಳಿ ಹಾಗು ಹಾಸ್ಯ ಕಲಾವಿದರಾದ ಲಕ್ಷ್ಮಣ ಭಂಡಾರಿ, ಹೊಸಂಗಡಿ ಇವರುಗಳಿಂದ ಅಮೋಘ ಯಕ್ಷಗಾನ ನೃತ್ಯ ಕಲಾ ವೈಭವ ಕಾರ್ಯಕ್ರಮ ನಡೆಯಿತು.

ರಾಕ್ಷಸ ಹಾಗು ರಾವಣನ ವೇಷಧಾರಿಯಾಗಿ ಹಳೇ ನಡೆಯ ಸಂಪ್ರದಾಯ ಬದ್ಧವಾಗಿ ರಂಗಸ್ಥಳವನ್ನು ಪ್ರವೇಶ ಮಾಡುವ ವೈಖರಿ ಮತ್ತು ಬೆಳಿಗ್ಗೆ ಎದ್ದು, ಹಲ್ಲು ಉಜ್ಜಿ, ಕೈಕಾಲು ಮುಖ ತೊಳೆದು, ಸ್ನಾನ ಮಾಡಿ, ಶಿವ ಪೂಜೆಯನ್ನು ಮಾಡುವ ಸನ್ನಿವೇಶ ಹಾಗು ಮೃಘ ಬೇಟೆಗಾಗಿ ತೆರಳುವ ವಿಶೇಷ ಸನ್ನಿವೇಶಗಳೊಂದಿಗೆ ಜಗನ್ನಾಥ ಆಚಾರಿಯವರು ತಮ್ಮ ಅಭಿನಯ ಸಾಮಾರ್ಥ್ಯವನ್ನು ರಂಗದಲ್ಲಿ ಪ್ರದರ್ಶಿಸಿದರು, ಜೊತೆಯಲ್ಲಿ ಯಕ್ಷಗಾನದಲ್ಲಿ ಬರುವ ಹಾಸ್ಯ ಸನ್ನಿವೇಶಗಳಾದ ಪೂಜೆಗೆ ಹೋಗುವ ಕಾಶಿ ಮಾಣಿಯ ಪಾತ್ರ ಘಟೋತ್ಕಜನ ದೂತನ ಪಾತ್ರ ಇನ್ನಿತರ ಹಾಸ್ಯ ಸನ್ನಿವೇಶಗಳಲ್ಲಿ ಹೊಸಂಗಡಿ ಲಕ್ಷ್ಮಣ ಭಂಡಾರಿಯವರು ಹಾಸ್ಯದ ಹೊನಲನ್ನು ಹರಿಸಿದ ಸನ್ನಿವೇಷಗಳೆಲ್ಲವೂ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದವು. ಪ್ರಾರಂಭದಲ್ಲಿ ಬಾಲಗೋಪಾಲರ ಪಾತ್ರದಲ್ಲಿ ನಗರದ ಕುಮಾರಿ ಭಾವನ ಹಾಗು ಕುಮಾರಿ ವಿದ್ಯಾಶ್ರೀ ಎಸ್.ಏಕಭೋಟೆ ಮನೋಜ್ಞವಾಗಿ ಯಕ್ಷಗಾನದ ಹಲವು ಹೆಜ್ಜೆಯೊಂದಿಗೆ ನೃತ್ಯ ಪ್ರದರ್ಶನ ಮಾಡಿದರು. ಇದಕ್ಕೆ ಪೂರಕವಾಗಿ ರಾಘವೇಂದ್ರ ಮುದ್ದುಮನೆಯವರ ಶ್ರುಶ್ರಾವ್ಯವಾದ ಯಕ್ಷಸಂಗೀತಕ್ಕೆ ಕೇಶವ ನಾಯಕ್ ಯಳ್ಳಂಪಳ್ಳಿ ಮದ್ದಳೆ, ಪ್ರದೀಪ್ ಕೆ.ವಿ ಬಾಳೆಹೊಳೆ ಇವರು ಚಂಡೆಯನ್ನು ನುಡಿಸಿ ಸಾತ್ ನೀಡಿದರು. ಕರಾವಳಿ ಮೂಲದ ಕಲೆಯಾದ ಯಕ್ಷಗಾನವು ವಿದ್ಯಾನಗರಿಯಾದ ದಾವಣಗೆರೆಯಲ್ಲಿ ನೋಡುಗರ ಮನಸೆಳೆದು ಮೆಚ್ಚುಗೆಗೆ ಪಾತ್ರವಾಯಿತು.

No comments:

Post a Comment