ಯೋಗತಜ್ಞ ಶ್ರೀ ಐ. ಶಶಿಕಾಂತ್ ಜೈನ್ರವರಿಗೆ
೨೦೧೨ ರ ಪ್ರತಿಷ್ಠಿತ ’ತಿರುಕಶ್ರೀ’ ಗೌರವ ಪುರಸ್ಕಾರ ಪ್ರದಾನ
ಆದರ್ಶ ಯೋಗ ಪ್ರತಿಷ್ಠಾನ (ರಿ),
ದಾವಣಗೆರೆ ವತಿಯಿಂದ ಮಲ್ಲಾಡಿಹಳ್ಳಿಯ ನಿಷ್ಕಾಮಯೋಗಿ ಪರಮಪೂಜ್ಯ ಶ್ರೀ ಶ್ರೀ ರಾಘವೇಂದ್ರ
ಸ್ವಾಮೀಜಿಯವರ ೧೬ನೇ ವಾರ್ಷಿಕ ಸಂಸ್ಮರಣೆ ನಿಮಿತ್ತ ಭಾರತೀಯ ಸನಾತನ ಯೋಗ ವಿದ್ಯೆಯ ಅನುಷ್ಠಾನ,
ಶಿಕ್ಷಣ ಹಾಗೂ ಪ್ರಚಾರ ಪ್ರಸಾರಗಳಲ್ಲಿ ಅಮೂಲ್ಯ ಮೌಲ್ಯಯುತ ಸೇವೆಯನ್ನು ಸಲ್ಲಿಸುತ್ತಿರುವ
ಮಹನೀಯರನ್ನು ಗೌರವಿಸಿ ಪುರಸ್ಕರಿಸುವ ನಿಟ್ಟಿನಲ್ಲಿ ೨೦೧೨ರ ಸಾಲಿನ ’ತಿರುಕಶ್ರೀ’ ಗೌರವ ಪುರಸ್ಕಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕರಾದ ಯೋಗತಜ್ಞ , ಸಂಶೋಧಕ ಶ್ರೀ ಐ. ಶಶಿಕಾಂತ್ ಜೈನ್ ಇವರು ಭಾಜನರಾಗಿರುತ್ತಾರೆ.
ಗೌರವ ಪುರಸ್ಕಾರವು ಗೌರವಧನ
ರೂ. ೫೦೦೧/- (ಐದು ಸಾವಿರದ ಒಂದು ರೂಪಾಯಿ)
ಶಾಲು ಮತ್ತು ಪುರಸ್ಕಾರ ಪತ್ರ, ಶ್ರೀಗಳ ವಿಶೇಷ ಫಲಕ,
ಫಲಪುಷ್ಪ, ಗಂಧದ ಹಾರದೊಂದಿಗೆ ಗೌರವಿಸಲಾಗುವುದು.
’ತಿರುಕ ಶ್ರೀ’ ಗೌರವ ಪುರಸ್ಕಾರ ಸಮಾರಂಭವು ದಾವಣಗೆರೆಯ ಪಿ.ಬಿ.
ರಸ್ತೆಯಲ್ಲಿರುವ ಆರ್.ಹೆಚ್. ಗೀತಾಮಂದಿರದಲ್ಲಿ ದಿನಾಂಕ: ೧೧-೮-೨೦೧೨ರ ಶನಿವಾರ ಸಂಜೆ ೫.೩೦ ಗಂಟೆಗೆ ನೆರವೇರಲಿದ್ದು ದಿವ್ಯ ಸಾನ್ನಿದ್ಯವನ್ನು
ಪರಮಪೂಜ್ಯ ಶ್ರೀ ಶ್ರೀ ಶಿವಾನಂದ ಮಹಾಸ್ವಾಮಿಗಳು, ಶ್ರೀ ಜಡೆ ಸಿದ್ದೇಶ್ವರ
ಶಿವಯೋಗಿಶ್ವರ ಶಾಂತಾಶ್ರಮ ದಾವಣಗೆರೆ,ಮುಖ್ಯ ಅತಿಥಿಗಳಾಗಿ ಜನತಾವಾಣಿ ಸುದ್ದಿ
ಸಂಪಾದಕರಾದ ಎಂ.ಎಸ್ ಶಿವಶರಣಪ್ಪ,ಬಾಪೂಜಿ ವಿದ್ಯಾ
ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಕಿರುವಾಡಿ ಗಿರಿಜಮ್ಮ,ಶಸ್ತ್ರ
ಚಿಕಿತ್ಸಾ ತಜ್ಞರಾದ ಡಾ|| ಬಿ.ಎಸ್ ನಾಗಪ್ರಕಾಶ್,ಪುರಸ್ಕಾರದ ಸೇವಾಕರ್ತ ವೀರೇಶ್ ಬೆಳಕೇರಿ ಹಾಗೂ ಅಂತರ್ರಾಷ್ಟೀಯ
ಯೋಗ ಪ್ರಶಸ್ತಿ ಪುರಸ್ಕೃತರಾದ ಡಾ|| ರಾಘವೇಂದ್ರ ಗುರೂಜಿ, ಇವರ ಉಪಸ್ಥಿತಿಯಲ್ಲಿ ನೆರವೇರಲಿದ್ದು ಈ ಸಂದರ್ಭದಲ್ಲಿ ಮಂದಾರ್ತಿ ಮೇಳದ ಪ್ರಸಿದ್ದ ಬಣ್ಣದ
ವೇಷದ ಕಲಾವಿದರಾದ ಶ್ರೀ ಜಗನ್ನಾಥ ಆಚಾರಿ, ಯಳ್ಳಂಪಳ್ಳಿ ಹಾಗೂ ಶ್ರೀ ಅಮೃತೇಶ್ವರಿ
ಮೇಳದ ಪ್ರಸಿದ್ದ ಹಾಸ್ಯ ಕಲಾವಿದರಾದ ಶ್ರೀ ಲಕ್ಷ್ಮಣ ಭಂಡಾರಿ ಹೊಸಂಗಡಿ ಇವರಿಂದ ’ಯಕ್ಷಗಾನ ನೃತ್ಯ ಕಲಾ ವೈಭವ’ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿದೆ.
ಇತೀ
ಭಗವತ್ತ್ಸೇವೆಯಲ್ಲಿ
ಯೋಗಾಚಾರ್ಯ ಶ್ರೀ ಡಾ|| ರಾಘವೇಂದ್ರ ಗುರೂಜಿ
No comments:
Post a Comment