Saturday, August 4, 2012

Bannada Vesha


ಯೋಗ ಶಿಬಿರದ ಸಮಾರೋಪದಲ್ಲಿ ಬಣ್ಣದ ಒಡ್ಡೋಲಗ



ಭಾರತೀಯ ಪರಂಪರೆಯ ಜನಪದ ಕಲಾ ಪ್ರಕಾರಗಳಲ್ಲಿ ವಿಶೇಷವಾದ ಸ್ಥಾನ ಮಾನ್ಯತೆ ಪಡೆದು ಬಹುಬೇಗ ಜನರನ್ನು ತನ್ನತ್ತ ಆಕರ್ಷಿಸುವ ಯಕ್ಷಗಾನವು ಜನಪ್ರೀಯ ಕಲಾ ಮಾಧ್ಯಮ.ಯಕ್ಷಗಾನದಲ್ಲಿ ಸಂಗೀತ,ನೃತ್ಯ,ಸಾಹಿತ್ಯ ಮತ್ತು ಭಾವ ಚಿತ್ರಣ ಮುಂತಾದವುಗಳ ಸಾಮರಸ್ಯವಿದೆ.ಯಕ್ಷಗಾನ ಕಲೆಯ ಕಥಾ ಪ್ರದರ್ಶನದ ಸಂದರ್ಭ ನವರಸಗಳ ಭಾವಾಭಿನಯಕ್ಕೆ ವಿಫುಲ ಅವಕಾಶವಿದೆ.ಪುರಾಣ ಪ್ರಸಂಗಗಳಲ್ಲಿ ಬರುವ ರಾಕ್ಷಸ ಪಾತ್ರಗಳ  ಚಿತ್ರಣವೇ ಅದ್ಭುತ ಮಾಯಾಲೋಕ. ಈ ಪಾತ್ರಗಳ ಚಿತ್ರಣ ವಿಶೇಷ ಹಾಗು ಕ್ಲಿಷ್ಟಕರ.ಇಂಥ ವಿಶೇಷವಾದ ಪಾತ್ರ ಚಿತ್ರಣವನ್ನು ಪರಿಚಯಿಸುವ ಪ್ರಯತ್ನ ಇದೇ ೨೦೧೨ ಆಗಸ್ಟ್ ೧೧ರ ಶನಿವಾರ ಸಂಜೆ ೬:೦೦ ರಿಂದ ಆರ್.ಹೆಚ್. ಗೀತಾ ಮಂದಿರದಲ್ಲಿಆದರ್ಶ ಯೋಗ ಪ್ರತಿಷ್ಠಾನದ ೧೬ನೇ ವಾರ್ಷಿಕ ಯೋಗ ಶಿಬಿರದ ಸಮಾರೋಪ, ತಿರುಕ ಶ್ರೀ ಪುರಸ್ಕಾರ ಸಮಾರಂಭದಲ್ಲಿ ಆಯೋಜಿಸಲಾಗಿದೆ.

ಈ ವಿಶೇಷ ಕಲಾ ಪ್ರದರ್ಶನದಲ್ಲಿ ಶ್ರೀ ಮಂದಾರ್ತಿ ಮೇಳದ ಅಂತರ್ರಾಷ್ಟ್ರೀಯ  ಸುಪ್ರಸಿದ್ಧ ಬಣ್ಣದ ವೇಷದ ಕಲಾವಿದರಾದ ಶ್ರೀ ಜಗನ್ನಾಥ ಆಚಾರಿ, ಯಳ್ಳಂಪಳ್ಳಿ ಇವರು ಬಣ್ಣದ ವೇಷದ ವೈವಿಧ್ಯತೆಯನ್ನು ಅನಾವರಣಗೊಳಿಸಲಿದ್ದಾರೆ ಇವರ ಜೊತೆ ಅಮೃತೇಶ್ವರೀ ಮೇಳದ ಪ್ರಸಿದ್ಧ ಹಾಸ್ಯ ಕಲಾವಿದರಾದ ಶ್ರೀ ಲಕ್ಷ್ಮಣ ಭಂಡಾರಿ ಇವರು ಹಾಸ್ಯದ ಹೊನಲನ್ನು ಹರಿಸಲಿದ್ದಾರೆ.

ಹಿಮ್ಮೇಳದಲ್ಲಿ ಯುವ ಭಾಗವತರಾದ ಶ್ರೀ ರಾಘವೇಂದ್ರ ಮುದ್ದುಮನೆ, ಮದ್ದಳೆಗಾರರಾಗಿ ಶ್ರೀ ಕೇಶವ ನಾಯಕ್,ಯಳ್ಳಂಪಳ್ಳಿ, ಚಂಡೆ ನುಡಿಸುವಿಕೆಯಲ್ಲಿ ಶ್ರೀ ಪ್ರದೀಪ್ ಕೆ.ವಿ ಬಾಳೆಹೊಳೆ ಇವರು ಸಹಕರಿಸಲದ್ದಾರೆ. ಬಾಲಗೋಪಾಲರಾಗಿ ಕು|| ಭಾವನಾ ಮತ್ತು ಕು|| ವಿದ್ಯಾಶ್ರೀ ಇವರು ಅಭಿನಯಿಸಲಿದ್ದು, ಹಟ್ಟಿಯಂಗಡಿ ಶ್ರೀ ಆನಂದ ಶೆಟ್ಟಿಯವರು ನಿರೂಪಿಸಲಿದ್ದಾರೆ.

ಬನ್ನಿ. . . . .  ಕರ್ನಾಟಕದ ಯಕ್ಷಗಾನ ಕಲಾ ಪ್ರಕಾರವನ್ನು ದಾವಣಗೆರೆಯಲ್ಲಿ ವೈಭವೀಕರಿಸುವ ನಮ್ಮ ಪ್ರಯತ್ನದಲ್ಲಿ ತಮ್ಮ ಉಪಸ್ಥಿತಿಯೊಂದಿಗೆ ಸಹಕರಿಸಿ.
- ಭಾಸ್ಕರ್ ನಾಯಕ್, ನೀಲಾವರ.



No comments:

Post a Comment