Tuesday, August 7, 2012

Tirukashree Award 2012 I ShaShiKanth Jain


ತಿರುಕಶ್ರೀ ಗೌರವ ಪುರಸ್ಕಾರ - ೨೦೧೨

ಯೋಗ ಕ್ಷೇತ್ರದಲ್ಲಿ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಿರುವ ಮಹನಿಯರನ್ನು ಗೌರವಿಸಿ ಪುರಸ್ಕರಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಗ ತಜ್ಞ, ಯೋಗ ಸಂಶೋಧಕ ಶ್ರೀ ಐ. ಶಶಿಕಾಂತ್ ಜೈನ್ ಇವರು ಭಾಜನರಾಗಿರುತ್ತಾರೆತನ್ನಿಮಿತ್ತ ಈ ಲೇಖನ.

ಕಿರು ಪರಿಚಯ
ಮಾನ್ಯ ಶ್ರೀ ಐ. ಶಶಿಕಾಂತ್ ಜೈನ್ ಇವರು ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಈದು ಗ್ರಾಮದವರು. ಪ್ರಸ್ತುತ ಶ್ರೀ ಕ್ಷೇತ್ರ ಧರ್ಮಸ್ಥಳದ  ಶಾಂತಿವನ ಟ್ರಸ್ಟ್ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಪ್ರಧಾನ ನಿರ್ದೇಶಕರಾಗಿ ಕಳೆದ ೧೨ ವರ್ಷಗಳಿಂ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಎಂ.ಎಸ್ಸಿ., ಇನ್ ಯೋಗ ಸ್ನಾತಕೋತ್ತರ ಪದವಿ, ವಿವೇಕಾನಂದ ಯೋಗ ಕೇಂದ್ರ, ಜಿಗಣಿಯಲ್ಲಿ ಯೋಗ ಡಿಪ್ಲೋಮಾ ಪದವಿ ಪಡೆದಿದ್ದು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಯೋಗ ವಿಶಯವಾಗಿ (ಪಿಹೆಚ್.ಡಿ,.) ಸಂಶೋಧನೆಯಲ್ಲಿ ನಿರತರಾಗಿರುತ್ತಾರೆ.
ಶ್ರೀ ಕ್ಷೇತ್ರದ ಯೋಜನೆಯಡಿಯಲ್ಲಿ ನಗರ, ಪಟ್ಟಣ ಹಾಗು ಗ್ರಾಮೀಣ ಪ್ರದೇಶದಲ್ಲಿ ಲಕ್ಷಾಂತರ ಆಸಕ್ತರಿಗೆ ಯೋಗ ಮತ್ತು ನೈತಿಕ ಶಿಕ್ಷಣವನ್ನು ನೀಡುತ್ತಿರುವುದಲ್ಲದೇ, ,೪೮೧ಕ್ಕೂ ಹೆಚ್ಚು ಶಿಕ್ಷಕರಿಗೆ ಯೋಗ ಮತ್ತು ಮೌಲ್ಯ ಶಿಕ್ಷಣದ ತರಬೇತಿ ನೀಡಿರುತ್ತಾರೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹಲವು ಬಾರಿ ಯೋಗ ಪ್ರಭಂಧವನ್ನು ಮಂಡಿಸಿರುತ್ತಾರೆ. ರಾಷ್ಟ್ರೀಯ ಯೋಗಾಸನ ಸ್ಪರ್ಧೆಯ ತೀರ್ಪುಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಯೋಗ ಚಿಕಿತ್ಸಾ ಸಲಹೆಗಾರರಾಗಿ ಹಲವು ಧೀರ್ಘತರ ಖಾಯಿಲೆಗಳನ್ನು ಗುಣಪಡಿಸಿದ ದಾಖಲೆ ಇವೆ.
ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ನಾಡಿನಾದ್ಯಂತ ಯೋಗ ಸೇವೆಯಲ್ಲಿ ಅನವರತ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಸಮಾರಂಭವು ಆದರ್ಶ ಯೋಗ ಪ್ರತಿಷ್ಠಾನ (ರಿ.)ದ ವತಿಯಿಂದ ಇದೇ ಆಗಸ್ಟ್ ೨೦೧೨ನೇ ಶನಿವಾರ ಸಂಜೆ ೫:೩೦ರಿಂದ ನಗರದ ಪಿ.ಬಿ. ರಸ್ತೆಯಲ್ಲಿರುವ ಆರ್.ಹೆಚ್. ಗೀತಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ತದನಂತರ ಅಮೋಘ ಯಕ್ಷಗಾನ ನೃತ್ಯ ಕಲಾ ವೈಭವ, ಬಣ್ಣದ ವೇಷ ಹಾಗು ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಬನ್ನಿ ಯೋಗ ಕಲಾಪೋಷಕರನ್ನು ಪ್ರೋತ್ಸಾಹಿಸಿ, ಅಭಿನಂದಿಸಿರಿ.
-      ಡಾ|| ರಾಘವೇಂದ್ರ ಗುರೂಜಿ 

1 comment:

  1. Good activities are going on for the good recognition!!
    Veeresh.N.Hiremath

    ReplyDelete