Saturday, August 4, 2012

Free Yoga Camp Inaugration


ಉಚಿತ ಚೈತನ್ಯ ಯೋಗ ಶಿಬಿರ ಉದ್ಘಾಟನೆ

ಮನಸ್ಸಿನ ಹತೋಟಿ ಹಾಗೂ ಏಕಾಗ್ರತೆಗಾಗಿ ಯೋಗಾಭ್ಯಾಸ ರೂಢಿಸಿಕೊಳ್ಳಿ
                                                                        -        ಪೂಜ್ಯ ಶ್ರೀ ಶ್ರೀ ಪರಮೇಶ್ವರ ಸ್ವಾಮೀಜಿ

ನಗರದ ಆರ್.ಹೆಚ್. ಗೀತಾ ಮಂದಿರದಲ್ಲಿ ಮಲ್ಲಾಡಿಹಳ್ಳಿ ಶ್ರೀಗಳ ಸಂಸ್ಮರಣೆ ನಿಮಿತ್ತ ೧೬ನೇ ವಾರ್ಷಿಕ ಯೋಗ ಶಿಬಿರದ
ಉದ್ಘಾಟನೆಯನ್ನು ಪೂಜ್ಯ ಶ್ರೀ ಪರಮೇಶ್ವರ ಸ್ವಾಮಿಜಿ ನೆರವೇರಿಸಿದರು.  ಚಿತ್ರದಲ್ಲಿ ವಿದ್ಯಾ ಶ್ರೀ ಏಕಬೋಟೆ, 
 ಅನೀಲ್‌ಕುಮಾರ್, ಟಿ. ಜೈಪ್ರಕಾಶ್, ಡಾ. ಯು. ಸಿದ್ದೇಶಿ, ಕಾಸಲ್ ಎಸ್.  ವಿಠಲ್, ಡಾ|| ಜಿ.ಗುರುಪ್ರಸಾದ್,
ಶಂಭುಲಿಂಗಯ್ಯ ಹಿರೇಮಠ್, ಜಯಶೀಲ್ ಹಿರೇಮಠ್,ಮಂಜುನಾಥ್ ಸಿ. ಕಣಕುಪ್ಪಿ, ಇದ್ದಾರೆ. 

ದಾವಣಗೆರೆ. .                           

        ನಾವು ಮನಸ್ಸಿನ ಗುಲಾಮರಾಗಬಾರದು. ಮನಸ್ಸು ನಮ್ಮ ಹತೋಟಿಯಲ್ಲಿರಬೇಕು. ಮನಸ್ಸು ಹತೋಟಿಯಲ್ಲಿರಬೇಕಾದರೆ ಏಕಾಗ್ರತೆ ಬೇಕು. ಮನಸ್ಸಿನ ಹತೋಟಿ ಹಾಗೂ ಏಕಾಗ್ರತೆ ಸಾಧಿಸಬೇಕಾದರೆ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ನಗರ ಸಮೀಪದ ಯರಗುಂಟೆ, ಅಶೋಕ ನಗರದಲ್ಲಿರುವ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದ ಪೂಜ್ಯ ಶ್ರೀ ಶ್ರೀ ಪರಮೇಶ್ವರ ಸ್ವಾಮೀಜಿ ತಿಳಿಸಿದರು.

        ಶ್ರೀಗಳು ಇಂದು ಬೆಳಿಗ್ಗೆ ಆದರ್ಶ ಯೋಗ ಪ್ರತಿಷ್ಠಾನ (ರಿ). ದಾವಣಗೆರೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಸಂಸ್ಮರಣೆ ನಿಮಿತ್ತ ೧೬ನೇ ವಾರ್ಷಿಕ ಉಚಿತ ಚೈತನ್ಯ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ದಿನದ ೨೪ ತಾಸುಗಳಲ್ಲಿ ೧೨ ಗಂಟೆ ಕಾಯಕ, ೬ ತಾಸು ನಿದ್ರೆ, ಇನ್ನುಳಿದ ೬ ತಾಸುಗಳಲ್ಲಿ ಪೂಜೆ ಪುನಸ್ಕಾರ, ಅಧ್ಯಯನ ಮಕ್ಕಳ ಹಾಗೂ ಕುಟುಂಬದವರೊಂದಿಗೆ ಪ್ರೀತಿ ವಿಶ್ವಾಸಗಳಿಂದ ಇದ್ದರೆ ಮನಸ್ಸು ಹಗೂರವಾಗಿ ಆರೋಗ್ಯವು ಉತ್ತಮ ರೀತಿಯಲ್ಲಿರುತ್ತದೆ. ಜಪ, ದ್ಯಾನ, ಯೋಗ ಇವುಗಳ ಸಾಧನೆಯಿಂದ ನಮ್ಮ ಆತ್ಮದಲ್ಲಿಯೇ ಪರಮಾತ್ಮನನ್ನು ಕಾಣಲು ಸಾಧ್ಯ. ಮಲ್ಲಾಡಿಹಳ್ಳಿ ಶ್ರೀಗಳು ಮಠ ಸ್ಥಾಪಿಸುವ ಪೂರ್ವದಲ್ಲಿ ಪ್ರತೀ ಮನೆಯ ಅಂಗಳನ್ನು ಗುಡಿಸಿ ಸಗಣಿ ಸಾರಿಸಿ ರಂಗೋಲಿಯನ್ನು ಹಾಕಿ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಹೊಸ ಆಂದೋಲನವನ್ನೇ ಮಾಡಿದ ಮಹಾಯೋಗಿ, ಇವರ ಸಂಸ್ಮರಣೆ ಆದರ್ಶ ಹಾಗೂ ಅನುಕರಣೀಯ ಎಂದರು.

        ಮುಖ್ಯ ಅತಿಥಿಗಳಾಗಿ ಕಾಸಲ್ ಎಸ್. ವಿಠ್ಠಲ್ ಮಾತನಾಡಿ ಯೋಗ ವಿದ್ಯೆ ಅತ್ಯಂತ ಶ್ರೇಷ್ಠವಾದುದು. ಇಂತಹ ಶಿಬಿರಗಳು ಹೆಚ್ಚೆಚ್ಚು ನಡೆಯಬೇಕು ಎಂದರು. ಜಿಲ್ಲಾ ಆಯುಷ್ ಅಧಿಕಾರಿ ಡಾ|| ಯು.ಸಿದ್ದೇಶಿ ಸರ್ಕಾರ ಮಾಡಬೇಕಾದ ಕೆಲಸ ಇಂದು ಡಾ|| ರಾಘವೇಂದ್ರ ಗುರೂಜಿಯವರು ಮಾಡುತ್ತಿದ್ದಾರೆ. ಮನಸ್ಸು ಮತ್ತು ದೇಹದ ಸಮತೋಲನ ಸಾಧಿಸಲು ಯೋಗ ಅತ್ಯಂತ ಸಹಕಾರಿ ಎಂದರು. ಡಾ|| ಜಿ. ಗುರು ಪ್ರಸಾದ್ ೨೦೨೦ ಕ್ಕೆ ಭಾರತ ದೇಶ ಮಧುಮೇಹದ ರಾಜಧಾನಿಯಾಗಲಿದೆ. ಒತ್ತಡದ ತೀವ್ರತೆ ಹೆಚ್ಚಾಗಿ ಮನುಷ್ಯ ಸಕ್ಕರೆ ಖಾಯಿಲೆ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಯೋಗದಿಂದ ರೋಗಮುಕ್ತವಾಗಲು ಸಾಧ್ಯ ಎಂದರು. ಆರೋಗ್ಯ ಸಲಹೆಗಾರ ಟಿ. ಜೈ ಪ್ರಕಾಶ್ ಯೋಗಾಭ್ಯಾಸದಿಂದ ಶರೀರದ ಎಲ್ಲಾ ಅಂಗಾಂಗಗಳ ಮೇಲೆ ಉತ್ತಮ ಪರಿಣಾಮವನ್ನು ಬೀರಿ ರಕ್ತ ಸಂಚಾರವು ಉತ್ತಮ ಗೊಂಡಾಗ ಆರೋಗ್ಯವು ಲಭಿಸುತ್ತದೆ ಎಂದರು.

        ಪ್ರಾರಂಭದಲ್ಲಿ ಕುಮಾರಿ ವಿದ್ಯಾಶ್ರೀ ಏಕಬೋಟೆ ಪ್ರಾರ್ಥಿಸಿದರು. ಯೋಗ ಶಿಕ್ಷಕ ಶಂಭುಲಿಂಗಯ್ಯ ಹಿರೇಮಠ್ ಎಲ್ಲರನ್ನು ಸ್ವಾಗತಿಸಿದರು. ಜಯಶೀಲ್ ಹಿರೇಮಠ್ ಪ್ರಾಶ್ತಾವಿಕ ನುಡಿ ನಮನ ಸಲ್ಲಿಸಿದರು ಅನೀಲ್ಕುಮಾರ್ ರಾಯ್ಕರ್ ಶಿಬಿರದ ಮಾಹಿತಿ ನೀಡಿದರು. ಮಂಜುನಾಥ್ ಸಿ. ಕಣಕುಪ್ಪಿ ಎಲ್ಲರನ್ನು ವಂದಿಸಿರು. ಯೋಗಶಿಕ್ಷಕ ವಿ.ಲಲಿತ್ ಕುಮಾರ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು. ಕೆ.ಕೆ. ಚಿದಾನಂದ ಸಹಕರಿಸಿದರು. ಕೊನೆಯಲ್ಲಿ ಡಾ|| ರಾಘವೇಂದ್ರ ಗುರೂಜಿ ಶ್ರೀ ಗುರು ಭಜನೆಯೊಂದಿಗೆ ಶಾಂತಿ ಮಂತ್ರವನ್ನು ಹೇಳಿಕೊಟ್ಟರು. ಯೋಗಶಿಬಿರವು ಆಗಸ್ಟ್ ೧೧ ರ ವರೆಗೆ ನಡೆಯಲಿದೆ.

No comments:

Post a Comment