ನಗರದಲ್ಲಿ ನಾಳೆ
ಉಚಿತ ಚೈತನ್ಯ ಯೋಗ ಶಿಬಿರ ಉದ್ಘಾಟನಾ ಸಮಾರಂಭ
ದಾವಣಗೆರೆ ಆ.೩೦
ಆದರ್ಶ ಯೋಗ ಪ್ರತಿಷ್ಠಾನ (ರಿ.)ದಾವಣಗೆರೆ ವತಿಯಿಂದ ಮಲ್ಲಾಡಿಹಳ್ಳಿ ಪರಮಪೂಜ್ಯ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿ ಸಂಸ್ಮರಣೆ ನಿಮಿತ್ತ ೧೬ನೇ ವಾರ್ಷಿಕ ಉಚಿತ ಚೈತನ್ಯ ಯೋಗ ಶಿಬಿರವು ನಗರದ ಪಿ.ಬಿ ರಸ್ತೆಯಲ್ಲಿರುವ ಆರ್.ಹೆಚ್. ಗೀತಾಮಂದಿರದಲ್ಲಿ ೧-೮-೨೦೧೨ರ ಬುಧವಾರ ಬೆಳಿಗ್ಗೆ ೬:೦೦ ಘಂಟೆಗೆ ಉದ್ಘಾಟನೆಗೊಳ್ಳಲಿದೆ.
ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದ ಪೂಜ್ಯ ಶ್ರೀ ಶ್ರೀ ಪರಮೇಶ್ವರ ಸ್ವಾಮೀಜಿ ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ಅನಾಥ ಸೇವಾಶ್ರಮ ಮಲ್ಲಾಡಿಹಳ್ಳಿ ಟ್ರಸ್ಟಿಗಳಾದ ಶ್ರೀ ಕಾಸಲ್ ಎಸ್.ವಿಠ್ಠಲ್,ಜಿಲ್ಲಾ ಆಯುಷ್ ಅಧಿಕಾರಿ ಡಾ|| ಯು. ಸಿದ್ದೇಶಿ,ಅಕಾಡೆಮಿ ಆಫ್ ಯೋಗಾ ಅಂಡ್ ಹೆಲ್ತ್‌ಕೇರ್‌ನ ಶ್ರೀ ಟಿ.ಜೈ ಪ್ರಕಾಶ್,ಬಾಪೂಜಿ ಮಕ್ಕಳ ಆಸ್ಪತ್ರೆಯ ನವಜಾತ ಶಿಶು ತಜ್ಞ ಡಾ|| ಜಿ.ಗುರುಪ್ರಸಾದ್ ಹಾಗು ಡಾ|| ರಾಘವೇಂದ್ರ ಗುರೂಜಿ ಉಪಸ್ಥಿತರಿರುವರು.ಶಿಬಿರಕ್ಕೆ ಸೇರಲಿಚ್ಚಿಸುವ ಆಸಕ್ತರು ಆಗಮಿಸಬೇಕಾಗಿ ಕೋರಲಾಗಿದೆ.
No comments:
Post a Comment