ಕೃತಜ್ಞತಾ ಭಾವದಿಂದ ಆರೋಗ್ಯವನ್ನು ಪರಿಪೂರ್ಣಗೊಳಿಸಬಹುದು
-ಡಾ|| ಧನಂಜಯ್ ಜಿ.ಗುಂಡೆ
ಆರ್.ಹೆಚ್. ಗೀತಾ ಮಂದಿರದಲ್ಲಿ ಎರಡು ದಿನದ ಯೋಗ ಉಪನ್ಯಾಸ
ಹಾಗು ಕಾರ್ಯಾಗಾರವನ್ನು ಡಾ|| ಧನಂಜಯ್ ಜಿ.ಗುಂಡೆ ಉದ್ಘಾಟಿಸಿದ
ಸಂದರ್ಭದಲ್ಲಿ ಶ್ರೀಮತಿ ಲಲಿತಾ ಗುಂಡೆ, ಡಾ|| ಎಂ. ಸಂಭಾಜಿ ರಾವ್, ಶಿರಡಿ
ಮಂದಿರದ ಶಿವಪ್ಪ, ಡಾ|| ರಾಘವೇಂದ್ರ ಗುರೂಜಿ, ವಿ.ಲಲಿತ್ ಕುಮಾರ್ ಜೈನ್,
ಶಂಭುಲಿಂಗಯ್ಯ ಹಿರೇಮಠ್, ಟಿ. ಜೈ ಪ್ರಕಾಶ್ ಚಿತ್ರದಲ್ಲಿ ಇದ್ದಾರೆ
ದಾವಣಗರೆ ಜು.೧೭ಮನುಷ್ಯನು ಸಮಾಜದಲ್ಲಿ ತಮ್ಮ ಸಂಬಂಧಗಳನ್ನು ಉತ್ತಮವಾಗಿಟ್ಟುಕೊಂಡಾಗ ಸಂತೋಷ ಮತ್ತು ಶಾಂತಿಯನ್ನು ಹೊಂದಬಹುದು. ಪರೋಪಕಾರಂ ಇದಂ ಶರೀರಂ ಎಂಬಂತೆ ಕೃತಜ್ಞತಾ ಭಾವದಿಂದ ಆರೋಗ್ಯವನ್ನು ಪರಿಪೂರ್ಣಗೊಳಿಸಿಕೊಳ್ಳಬಹುದು ಎಂದು ಅಂತರ್‌ರಾಷ್ಟ್ರೀಯ ಸುಪ್ರಸಿದ್ಧ ಯೋಗ ವೈದ್ಯರಾದ ಕೊಲ್ಲಾಪುರದ ಜಿ.ಜೆ.ಜಿ ಯೋಗ ಆಕಾಡೆಮಿಯ ನಿರ್ದೇಶಕ ಡಾ|| ಧನಂಜಯ್ ಜಿ. ಗುಂಡೆಯವರು ಅಭಿಪ್ರಾಯ ಪಟ್ಟರು.
ಅವರು ನಗರದ ಆರ್.ಹೆಚ್. ಗೀತಾಮಂದಿರದಲ್ಲಿ ಆಕಾಡೆಮಿ ಆಫ್ ಯೋಗ ಅಂಡ್ ಹೆಲ್ತ ಕೇರ್ ಮತ್ತು ಆದರ್ಶ ಯೋಗ ಪ್ರತಿಷ್ಠಾನ (ರಿ.) ದಾವಣಗೆರೆ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಯೋಗ ಉಪನ್ಯಾಸ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಿಗೆ ತನ್ನಲ್ಲಿ ಏನಿದೆಯೋ ಅದರ ಬಗ್ಗೆ ಸಮಾಧಾನವಿಲ್ಲ,ಏನಿಲ್ಲವೋ ಅದರ ಬಗ್ಗೆ ಸದಾ ಯೋಚನೆ ಹೀಗಾಗಿ ಶರೀರದ ಅನೇಕ ಮುಖ್ಯ ಅಂಗಾಂಗಗಳ ಮೇಲೆ ಪರಿಣಾಮ ಬೀರಿ ಅನೇಕ ಧೀರ್ಘತರ ಖಾಯಿಲೆಗಳು ಬರುತ್ತವೆ. ಸಿಟ್ಟು ಆರೋಗ್ಯವನ್ನು ಹಾಳು ಮಾಡುವ ಒಂದು ಮಾನಸಿಕ ಪ್ರಕ್ರಿಯೆ.ಮನಸ್ಸು ನಮ್ಮ ಕೆಲಸಗಾರನಿದ್ದಂತೆ, ನಾವು ಅದರ ಮಾಲೀಕರಿದ್ದಂತೆ, ಹೀಗೆ ಹತ್ತು ಹಲವು ವಿಷಯಗಳೊಂದಿಗೆ ನಮ್ಮ ಸಂಬಂಧವನ್ನು ನಿತ್ಯ ಜೀವನದಲ್ಲಿ ಹೇಗೆ ನಿರ್ವಹಿಸಬೇಕು ಎನ್ನುವ ವಿಷಯವನ್ನು ಉದಾಹರಣೆಯೊಂದಿಗೆ ಮಾರ್ಮಿಕವಾಗಿ ತಿಳಿಸಿಕೊಟ್ಟರು.
ಉತ್ತಮ ಜೀವನ ಶೈಲಿಯ ಒಳಗುಟ್ಟು ಹಗು ಯೋಗ ಮಾರ್ಗದ ಮೂಲಕ ಒತ್ತಡದಿಂದ ಕೂಡಿದ ಆಧುನಿಕ ಬದುಕಿನ ಸಮಸ್ಯೆಗಳಿಗೆ ಪರಿಹಾರೋಪಾಯಗಳು ಎಂಬ ವಿಷಯದ ಮೇಲೆ ಎರಡು ದಿನದ ಕಾರ್ಯಾಗಾರವನ್ನು ನಡೆಸಿಕೊಟ್ಟರು.ಡಾ|| ರಾಘವೇಂದ್ರ ಗುರೂಜಿಯವರು ಮಾನಸಿಕ ಆಲಸ್ಯ ನಿವಾರಣೆಗಾಗಿ ಶಾರೀರಿಕ ಚಟುವಟಿಕೆಯ ಸರಳ ವಿಧಾನವನ್ನು ಪರಿಚಯಿಸಿರು. ಟಿ. ಜೈ ಪ್ರಕಾಶ್‌ರವರು ತಮ್ಮ ಅನುಭವವನ್ನು ಹಂಚಿಕೊಂಡರು.
ಪ್ರಾರಂಭದಲ್ಲಿ ಶಾಂತಿಮಂತ್ರ ಹಾಘು ಶಂಖನಾದದ ನಂತರ ಶ್ರೀಮತಿ ಚೇತನಾ ಪದ್ಮರಾಜ್ ಪ್ರಾರ್ಥಿಸಿದರು.ಶಂಭುಲಿಂಗಯ್ಯ ಹಿರೇಮಠ್ ಎಲ್ಲರನ್ನೂ ಸ್ವಾಗತಿಸಿದರು.ಟಿ. ಜೈ ಪ್ರಕಾಶ್ ಉಪನ್ಯಾಸಕರ ಪರಿಚಯವನ್ನು ಮಾಡಿದರು. ಕೊನೆಯಲ್ಲಿ ಅನೀಲ್ ಕುಮಾರ್ ರಾಯ್ಕರ್ ಎಲ್ಲರನ್ನು ವಂದಿಸಿದರು. ವಿ ಲಲಿತ್ ಕುಮಾರ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು. ಧನಂಜಯ ದೀಕ್ಷಿತ್,ಕುಮಾರಿ ವಿದ್ಯಾಶ್ರೀ ಏಕಭೋಟೆ, ಕೆ.ಕೆ. ಚಿದಾನಂದ, ಜಯಶೀಲ್ ಹಿರೇಮಠ್,ಇನ್ನಿತರರು ಕಾರ್ಯಾಗಾರದ ಯಶಸ್ಸಿಗೆ ಸಹಕರಿಸಿದರು.
No comments:
Post a Comment