2012 ಆಗಸ್ಟ ೧ ರಿಂದ ಮಲ್ಲಾಡಿಹಳ್ಳಿ
ಶ್ರೀ ರಾಘವೇಂದ್ರ ಸ್ವಾಮೀಜಿ ಸ್ಮರಣಾರ್ಥ
ಉಚಿತ ಚೈತನ್ಯ ಯೋಗ ಶಿಬಿರ
ದಾವಣಗೆರೆ.ಜು.೨೧
ಆದರ್ಶ ಯೋಗ ಪ್ರತಿಷ್ಠಾನ (ರಿ.)
ದಾವಣಗೆರೆ ವತಿಯಿಂದ ಮಲ್ಲಾಡಿಹಳ್ಳಿಯ ಪರಮಪೂಜ್ಯ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿಯವರ
ಸಂಸ್ಮರಣೆ ನಿಮಿತ್ತ ಇದೇ ೨೦೧೨ರ ಆಗಸ್ಟ್ ೧ ರಿಂದ
೧೧ರ ವರೆಗೆ ೧೧ ದಿವಸಗಳ ಕಾಲ ನಗರದ ಪಿ.ಬಿ ರಸ್ತೆಯಲ್ಲಿರುವ ಆರ್.ಹೆಚ್. ಗೀತಾಮಂದಿರದಲ್ಲಿ ೧೬ನೇ
ವಾರ್ಷಿಕ ’ಉಚಿತ ಚೈತನ್ಯ ಯೋಗ ಶಿಬಿರ’ವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರವನ್ನು ಅಂತರ್ರಾಷ್ಟ್ರೀಯ ಯೋಗ ಪ್ರಶಸ್ತಿ ಪುರಸ್ಕೃತ ಡಾ|| ರಾಘವೇಂದ್ರ ಗುರೂಜಿ ನಡೆಸಿಕೊಡಲಿದ್ದಾರೆ.
ಶಿಬಿರವು ಪ್ರತಿದಿನ ಬೆಳಿಗ್ಗೆ
ಮತ್ತು ಸಂಜೆ ೬:೦೦ ಘಂಟೆ ಯಿಂದ ೭:೧೫ರ ವರೆಗೆ ಎರಡು ಪ್ರತ್ಯೇಕ ತರಗತಿಗಳು ನಡೆಯಲಿವೆ. ೮ ವರ್ಷದ
ಮೇಲ್ಪಟ್ಟ ಸ್ತ್ರೀ-ಪುರುಷರೆಲ್ಲರೂ ಭಾಗವಹಿಸಬಹುದು.ಶಿಬಿರದಲ್ಲಿ ಮುಖ್ಯವಾಗಿ ಧ್ಯಾನ,ಪ್ರಾಣಾಯಾಮ,ಆಸನ.ಸೂಕ್ಷ್ಮ
ಹಾಗು ಸ್ತೂಲ ಯೋಗಾಭ್ಯಾಸ,ಶಾಂತಿ ಮಂತ್ರಗಳು,ಭಜನೆ,ಮಹರ್ಷಿ ಪತಂಜಲಿಯ
ಅಷ್ಟಾಂಗ ಯೋಗದ ಕ್ರಮಗಳನ್ನು ವೈಜ್ಞಾನಿಕ ಪದ್ಧತಿಯಲ್ಲಿ ಅಳವಡಿಸಲಾಗಿದ್ದು, ಹಲವು ಧೀರ್ಘತರ ಸಮಸ್ಯೆಗಳಿಗೆ ಮಾರ್ಗದರ್ಶನವನ್ನು ನೀಡಲಾಗುವುದು.
ಆಸಕ್ತರು ಶಂಭುಲಿಂಗಯ್ಯ
ಹಿರೇಮಠ್ ಮೊ-99008 99408 ಮತ್ತು 94484 22829 ಸಂಪರ್ಕಿಸಿ ಹೆಸರನ್ನು ನೊಂದಾಯಿಸಬಹುದು.
No comments:
Post a Comment