Tuesday, July 10, 2012

ಅಂತರ್‌ರಾಷ್ಟ್ರೀಯ ಯೋಗವೈದ್ಯ ಡಾ|| ಧನಂಜಯ್ ಜಿ.ಗುಂಡೆ ಇವರಿಂದ ಉಪನ್ಯಾಸ ಹಾಗು ಯೋಗ ಕಾರ್ಯಾಗಾರ


ಅಂತರ್ರಾಷ್ಟ್ರೀಯ ಯೋಗವೈದ್ಯ ಡಾ|| ಧನಂಜಯ್ ಜಿ.ಗುಂಡೆ
ಇವರಿಂದ ಉಪನ್ಯಾಸ ಹಾಗು ಯೋಗ ಕಾರ್ಯಾಗಾರ
ದಾವಣಗೆರೆ, ಜು.10

ಅಕಾಡೆಮಿ ಆಫ್ ಯೋಗ ಅಂಡ್ ಹೆಲ್ತ್ ಕೇರ್ ಮತ್ತು ಆದರ್ಶ ಯೋಗ ಪ್ರತಿಷ್ಠಾನ (ರಿ.) ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಇದೇ ಜಲೈ 14ರ ಶನಿವಾರ ಸಂಜೆ 6 ಗಂಟೆಯಿಂದ ನಗರದ ಪಿ.ಬಿ.ರಸ್ತೆಯಲ್ಲಿರುವ ಆರ್.ಹೆಚ್.ಗೀತಾಮಂದಿರದಲ್ಲಿ ವಿಶೇಷ ಉಚಿತ ಯೋಗ ಉಪನ್ಯಾಸ ಹಾಗು ಮಹಾ ಸತ್ಸಂಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಉಪನ್ಯಾಸವನ್ನು ಅಂತರ್ರಾಷ್ಟ್ರೀಯ ಸುಪ್ರಸಿದ್ಧ ಯೋಗ ಶಿರೋಮಣಿ,ಯೋಗ ವೈದ್ಯರಾದ ಡಾ|| ಧನಂಜಯ್ ಜಿ.ಗುಂಡೆ, ಕೊಲ್ಲಾಪುರ. ಇವರು ಕಾರ್ಯಾಕ್ರಮವನ್ನು ನಡೆಸಿಕೊಡಲಿದ್ದಾರೆ.ಅಂದು ಉತ್ತಮ ಜೀವನ ಶೈಲಿಯ ಒಳಗುಟ್ಟು ಎಂಬ ವಿಷಯವಾಗಿ ವೈಜ್ಞಾನಿಕ ಹಿನ್ನಲೆಯೊಂದಿಗೆ ವಿಷಯನ್ನು ಮಂಡಿಸಲಿದ್ದಾರೆ.
ದಿನಾಂಕ 15-------.7-------------------.2012ರ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 4:00 ಘಂಟೆಯವರೆಗೆ ವಿಶೇಷ ಧ್ಯಾನ ಯೋಗ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಯೋಗ ಮಾರ್ಗದ ಮೂಲಕ,ಒತ್ತಡದಿಂದ ಕೂಡಿದ ಆಧುನಿಕ ಬದುಕಿನ ಸಮಸ್ಯೆಗಳಿಗೆ ಪರಿಹಾರೋಪಾಯಗಳು ಹಾಗು ಧ್ಯಾನದ ವಿಷಯವನ್ನು ತಿಳಿಸಿಕೊಡಲಿದ್ದಾರೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಶ್ರೀ ಟಿ.ಜೈ ಪ್ರಕಾಶ್, ಮೊ- 98440 49943 ಹಾಗೂ ಡಾ|| ರಾಘವೇಂದ್ರ ಗುರೂಜಿ, ಮೊ- 94484 22829 ಇವರನ್ನು ಸಂಪರ್ಕಿಸಿ ಹೆಸರು ನೊಂದಾಯಿಸಬಹುದು.ಈ ಎರಡು ದಿವಸದ ಯೋಗ ಕಾರ್ಯಕ್ರಮವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಅಕಾಡೆಮಿಯ ಮುಖ್ಯಸ್ಥ ಟಿ.ಜೈ ಪ್ರಕಾಶ್ ಕೋರಿದ್ದಾರೆ.



No comments:

Post a Comment