Sunday, July 1, 2012

Chandana Tv Program



ಜುಲೈ 8 ರಿಂದ  ಚಂದನ ವಾಹಿನಿಯಲ್ಲಿ
ಡಾ. ರಾಘವೇಂದ್ರ ಗುರೂಜಿ ಯೋಗ ಕಾರ್ಯಕ್ರಮ

ಆದರ್ಶ ಯೋಗ ಪ್ರತಿಷ್ಠಾನ [ರಿ] ದಾವಣಗೆರೆಯ ಯೋಗ ಗುರು ಡಾ|| ರಾಘವೇಂದ್ರ ಗುರೂಜಿ ಯವರ ಯೋಗ ಕಾರ್ಯಕ್ರಮವು ಇದೇ ಜುಲೈ 8 ರ ಭಾನುವಾರದಿಂದ ಆಗಸ್ಟ್ 5  ರ ವರೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ 'ಯೋಗ ದೀಪ್ತಿ' ಎಂಬ ಕಾರ್ಯಕ್ರಮವು ಪ್ರತೀ ಭಾನುವಾರ ಬೆಳಿಗ್ಗೆ 6:45 ರಿಂದ 7:00 ಗಂಟೆಯವರೆಗೆ 15 ನಿಮಿಷಗಳ ಕಾಲ 5 ಸಂಚಿಕೆಗಳು ಕ್ರಮವಾಗಿ ಪ್ರಸಾರವಾಗಲಿವೆ.

ಯೋಗ ಕಾರ್ಯಕ್ರಮವು ದಿನಾಂಕ 8-7-2012ರ ಭಾನುವಾರ ಮಾನನಸಿಕ ಆಲಸ್ಯ ನಿವಾರಣೆ,




15-7-2012ರ ಭಾನುವಾರ ಕಂಪ್ಯೂಟರ್ ಉದ್ಯೋಗಿಗಳಿಗೆ ಉಪಯುಕ್ತ  ಯೋಗಾಭ್ಯಾಸಗಳು, 22-7-2012 ರ ಭಾನುವಾರ ದೀರ್ಘ ವಿಶ್ರಾಂತಿಯ ಅಭ್ಯಾಸಗಳು, 29-7-2012ರ ಭಾನುವಾರ ಭುಜಂಗಾಸನದ ಪ್ರಕಾರಗಳು, 5-8-2012ರ ಭಾನುವಾರ ಧ್ಯಾನ ಪೂರ್ವಕ ಆಸನಗಳ ಅಭ್ಯಾಸ ವೆಂಬ ಐದು ವಿಶೇಷ ಸಂಚಿಕೆಗಳು ಪ್ರಸಾರವಾಗಲಿವೆ, ಸಂಚಿಕೆಯನ್ನು ಬಿ.ಎಲ್ ಲಲಿತಾರವರು ನಿದರ್ೇಶಿಸಿದ್ದು ಎನ್.ಶಕುಂತಲಾ ಇವರು ನೆರವು ನೀಡಿರುತ್ತಾರೆ.

ಕಾರ್ಯಕ್ರಮದಲ್ಲಿ ನಗರದ ಯೋಗ ಸಾಧಕ,ಸಾಧಕಿಯರಾದ  ಕುಮಾರಿ ಪ್ರಜ್ಞಾ ಶಮರ್ಾ ಕೆ.ಎಸ್, ಕುಮಾರಿ ಪೃಥ್ವಿ ಶಮರ್ಾ ಕೆ.ಎಸ್, ಕುಮಾರಿ ವಿದ್ಯಾಶ್ರೀ ಎಸ್.ಏಕಭೋಟೆ, ಶ್ರೀ ಅನೀಲ್ ಕುಮಾರ್ ರಾಯ್ಕರ್, ಶ್ರೀ ಜಯಶೀಲ್ ಹಿರೇಮಠ್ ಇವರುಗಳು ಭಾಗವಹಿಸಿರುತ್ತಾರೆ.ವೀಕ್ಷಕ ಭಾಂದವರು ಇದರ ಸದುಪಯೋಗವನ್ನು ಪಡೆಯುವಂತೆ ಕೋರಲಾಗಿದೆ.



No comments:

Post a Comment