Monday, June 18, 2012

ಅಂತಾರಾಷ್ಥ್ರೀಯ 'ಹೂ ಇಸ್ ಹೂ' ಡೈರೆಕ್ಟರಿಯಲ್ಲಿ ಡಾ.ರಾಘವೇಂದ್ರ ಗುರೂಜಿ 'ಬಯೋಗ್ರಫಿ' ಸೇರ್ಪಡೆ.




ಅಂತಾರಾಷ್ಥ್ರೀಯ 'ಹೂ ಇಸ್ ಹೂ' ಡೈರೆಕ್ಟರಿಯಲ್ಲಿ

ಡಾ.ರಾಘವೇಂದ್ರ ಗುರೂಜಿ 'ಬಯೋಗ್ರಫಿ' ಸೇರ್ಪಡೆ.

ದಾವಣಗೆರೆ ಜೂ,18 
ನಗರದ ಆದರ್ಶ ಯೋಗ ಪ್ರತಿಷ್ಠಾನ (ರಿ.) ದಾವಣಗೆರೆಯ ಯೋಗ ಗುರು ಡಾ.ರಾಘವೇಂದ್ರ ಗುರೂಜಿಯವರ 'ಬಯೋಗ್ರಫಿ'ಯು ಅಂತಾರಾಷ್ಟ್ರೀಯ ಪ್ರತಿಷ್ಠಿತ 'ಹೂ ಇಸ್ ಹೂ' ನ ಹೊಲಿಸ್ಟಿಕ್ ಹೆಲ್ತ್ ಅಂಡ್ ವೆಲ್ನೆಸ್ ನ ಡೈರೆಕ್ಟರಿಯಲ್ಲಿ ಸೇರ್ಪಡೆಯಾಗಿದೆ.

ಭಾರತೀಯ ಸನಾತನ ಪರಂಪರೆಯ ಪದ್ಧತಿಯಾದ  ಯೋಗ,ಆಯುವರ್ೇದ,ಹೋಮಿಯೋಪತಿ,ಸಿದ್ಧ,ಯುನಾನಿ,ಅಕ್ಯೂಪ್ರೆಶರ್,ಅಕ್ಯೂಪಂಚರ್,ಇನ್ನಿತರ ಸನಾತನ ಚಿಕಿತ್ಸಾ ಪದ್ಧತಿಯೊಂದಿಗೆ ಜನಸಾಮಾನ್ಯರಿಗೆ ಆರೋಗ್ಯವನ್ನು ಒದಗಿಸಿ ಅಪೂರ್ವ ಸೇವೆಯೊಂದಿಗೆ ಸಾಧನೆಯನ್ನು ಮಾಡಿದ ಪ್ರತಿಭಾವಂತರ ವ್ಯಕ್ತಿ ಪರಿಚಯದೊಂದಿಗೆ ಜೀವಮಾನ ಸಾಧನೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿ ಗೌರವಿಸುವ ಮೂಲಕ ಭಾರತೀಯ ಪರಂಪರೆಯ ತತ್ಸಮಾನ ವೈದ್ಯ ಪದ್ಧತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಡೈರಕ್ಟರಿಯನ್ನು ಪ್ರಕಟಿಸಲಾಗಿದ್ದು ಜುಲೈ ಅಂತ್ಯದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಡಾ.ರಾಘವೇಂದ್ರ ಗುರೂಜಿಯವರು ಕಳೆದ 33 ವರ್ಷಗಳಿಂದ ಯೋಗ ಕ್ಷೇತ್ರದಲ್ಲಿ ಉಚಿತ ಸೇವೆಯನ್ನು ಸಲ್ಲಿಸುತ್ತಿದ್ದು, ಈಗಾಗಲೆ 1025ಕ್ಕೂ ಹೆಚ್ಚು ಉಚಿತ ಯೋಗ ಶಿಬಿರ,ಯೋಗ ಕಾಯರ್ಾಗಾರಗಳನ್ನು ನಡೆಸಿರುತ್ತಾರೆ. ಮಾರ್ಗದಶರ್ಿ ಯೋಗ ಕೈಪಿಡಿ,ಬಾಲ ಯೋಗ ಕೈಪಿಡಿ,ಯೋಗ ವಕರ್್ಶಾಪ್ (ಇಂಗ್ಲೀಷ್),ಸರಳ ಯೋಗ ಕೈಪಿಡಿ ಮುಂತಾದ ಯೋಗ ಕೃತಿಗಳನ್ನು ರಚಿಸಿದ್ದು,ಸೂರ್ಯನಮಸ್ಕಾರ ಟೆಲಿಚಿತ್ರ,ಧ್ಯಾನ ಸಹಿತ ಭಜನೆ (ಸಿ.ಡಿ/ಆಡಿಯೋ),ಯೋಗ ಸಂಜೀವಿನಿ,ಪ್ರಾಣಾಯಮ ಮಹತ್ವ,ಧ್ಯಾನ-ಶವಾಸನ,ಪ್ರಾಣಾಯಾಮದ ಮೊದಲ ಪಾಠ,ಡಯಾಬಿಟಿಕ್ ನಿವಾರಣೆ ಮುಂತಾದ ಯೋಗ ಡಿ.ವಿ.ಡಿಗಳನ್ನು ಲೋಕಾರ್ಪಣೆ ಮಾಡಿರುತ್ತಾರೆ, ಯು.ಎಸ್.ಎ ಫೆಲೋಷಿಪ್ನೊಂದಿಗೆ ರಾಷ್ಟ್ರೀಯ ಹಲವು ಪ್ರಶಸ್ತಿ,ಬಿರುದುಗಳು ಲಭಿಸಿರುತ್ತದೆ.ಭಾರತೀಯ ಯೋಗ ಪದ್ಧತಿಯ ಸಮಗ್ರ ಅಧ್ಯಯನಕ್ಕಾಗಿ ಯರೋಪ್ ವಿಶ್ವವಿದ್ಯಾನಿಲಯದಲ್ಲಿ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯೊಂದಿಗೆ ಬಂಗಾರದ ಪದಕವನ್ನು ಗಳಿಸಿರುತ್ತಾರೆ.

ಈ ಅಪೂರ್ವ ಸಾಧನೆಗಳನ್ನು ಪರಿಗಣಿಸಿ ಅಂತಾರಾಷ್ಟ್ರೀಯ ಮಟ್ಟದ ಪ್ರತಿಭಾವಂತರ ಪಟ್ಟಿಯಲ್ಲಿ ಕೇವಲ 500 ಸಾಧಕರ ಪರಿಚಯ ಮಾತ್ರವಿದ್ದೂ  ಡಾ.ರಾಘವೇಂದ್ರ ಗುರೂಜಿಯವರೂ ಸಹ ಸೇರ್ಪಡೆಯಾಗಿರುತ್ತಾರೆ ಎಂದು ಐ.ಬಿ.ಎ.ಎಂ ಅಕಾಡೆಮಿಯ ಅಧ್ಯಕ್ಷರಾದ ಡಾ.ಸುರೇಶ್ ಕುಮಾರ್ ಅಗರ್ವಾಲ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


No comments:

Post a Comment