Sunday, January 29, 2012



ರಥಸಪ್ತಮಿ ಆಚರಣೆ ನಿಮಿತ್ತ

ಸೊಕ್ಕೆ ಗ್ರಾಮದಲ್ಲಿ ಬ್ರಹತ್ ಸೂರ್ಯನಮಸ್ಕಾರ ಯಜ್ಞ
ದಾವಣಗೆರೆ ಜ.೨೯

ಆದರ್ಶ ಯೋಗ ಪ್ರತಿಷ್ಠಾನ (ರಿ) ದಾವಣಗೆರೆ ವತಿಯಿಂದ ಜಿಲ್ಲೆಯ ಜಗಳೂರು ತಾಲ್ಲೂಕಿನ ಸೊಕ್ಕೆ ಗ್ರಾಮದಲ್ಲಿ ’ರಥಸಪ್ತಮಿ’ಯ ನಿಮಿತ್ತ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆಯ ಆವರಣದಲ್ಲಿ ಬ್ರಹತ್ ಸೂರ್ಯನಮಸ್ಕಾರ ಯಜ್ಞ ಹಾಗೂ ಶೈಕ್ಷಣಿಕ ಪ್ರಗತಿಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪಾತ್ರವೆಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಯೋಗಗುರು ಡಾ|| ರಾಘವೇಂದ್ರ ಗುರೂಜಿಯವರು ನಡೆಸಿಕೊಡುವರು,ಯೋಗಸಾಧಕ ಶ್ರೀ ಶಂಭುಲಿಂಗಯ್ಯ ಹಿರೇಮಠ್ ಯೋಗಪ್ರದರ್ಶನ ನೀಡುವರು.ಮುಖ್ಯ ಅತಿಥಿಗಳಾಗಿ ಸೊಕ್ಕೆ ಗ್ರಾಮಪಂಚಾಯತಿ ಅಧ್ಯಕ್ಷ ಶ್ರೀ ಹೆಚ್.ಟಿ.  ಶ್ರೀನಿವಾಸ್,ಸದಸ್ಯರಾದ ಶ್ರೀ ಬಿ.ಭೋಜಪ್ಪ ಹಾಗೂ ಶ್ರೀ ಕೆ.ನಾಗಭೂಷಣ್,ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ಹೆಚ್ ನಂಜಪ್ಪ, ಕುಮಾರ ನಾಯ್ಕ,ಚಿದಾನಂದಪ್ಪ ಇವರುಗಳು ಆಗಮಿಸುವರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸೂರ್ಯನಾರಾಯಣನ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.

No comments:

Post a Comment