ಮಾರ್ಚ್ 11 ರಿಂದ ಚಂದನ ವಾಹಿನಿಯಲ್ಲಿ
ಡಾ|| ರಾಘವೇಂದ್ರ ಗುರೂಜಿ ಯೋಗ ಕಾರ್ಯಕ್ರಮ
ಆದರ್ಶ ಯೋಗ ಪ್ರತಿಷ್ಠಾನ (ರಿ) ದಾವಣಗೆರೆಯ ಯೋಗ ಗುರು ಡಾ|| ರಾಘವೇಂದ್ರ ಗುರೂಜಿ ಯವರ ಯೋಗ ಕಾರ್ಯಕ್ರಮವು ಇದೇ ಮಾರ್ಚ್ 11 ರ ಭಾನುವಾರದಿಂದ ಏಪ್ರಿಲ್ ೮ರ ವರೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ ’ಯೋಗ ದೀಪ್ತಿ’ ಎಂಬ ಕಾರ್ಯಕ್ರಮವು ಪ್ರತೀ ಭಾನುವಾರ ಬೆಳಿಗ್ಗೆ 6:45 ರಿಂದ 7:00 ಗಂಟೆಯವರೆಗೆ 15 ನಿಮಿಷಗಳ ಕಾಲ ೫ ಸಂಚಿಕೆಗಳು ಕ್ರಮವಾಗಿ ಪ್ರಸಾರವಾಗಲಿವೆ.
ಯೋಗ ಕಾರ್ಯಕ್ರಮವು ದಿನಾಂಕ 11-3-2012ರ ಭಾನುವಾರ ಹೃದ್ರೋಗ ಪರಿಹಾರಕ್ಕಾಗಿ ಯೋಗಾಭ್ಯಾಸಗಳು,೧೮-೩-೨೦೧೨ರ ಭಾನುವಾರ ಅನಿದ್ರೆ ಪರಿಹಾರಕ್ಕಾಗಿ ಯೋಗಾಭ್ಯಾಸಗಳು, 25-3-2012 ರ ಭಾನುವಾರ ಕಶೇರು ಸುದೃಢತೆಗಾಗಿ ಯೋಗಾಭ್ಯಾಸಗಳು,1-4-2012ರ ಭಾನುವಾರ ಪದ್ಮಾಸನದ ಪೂರ್ವತಯಾರಿ ಅಭ್ಯಾಸಗಳು,8-4-2012ರ ಭಾನುವಾರ ದೇಹ ತಂಪುಗೊಳಿಸುವ ಪ್ರಾಣಾಯಾಮಗಳು ಎಂಬ ಐದು ವಿಶೇಷ ಸಂಚಿಕೆಗಳು ಪ್ರಸಾರವಾಗಲಿವೆ,ಸಂಚಿಕೆಯನ್ನು ಬಿ.ಎಲ್ ಲಲಿತಾರವರು ನಿರ್ದೇಶಿಸಿದ್ದು ಎನ್.ಶಕುಂತಲಾ ಇವರು ನೆರವು ನೀಡಿರುತ್ತಾರೆ.
ಕಾರ್ಯಕ್ರಮದಲ್ಲಿ ನಗರದ ಯೋಗಸಾಧಕಿಯರಾದ ಶ್ರೀಮತಿ ಗೀತಾ ರೋಖಡೆ,ಶ್ರೀಮತಿ ಶಿಲ್ಪಾ ವೀರೇಶ್,ಶ್ರೀಮತಿ ಶೋಭಾ ಬಿ.ಕೆ,ಶ್ರೀಮತಿ ಪ್ರೀತಿ ಜಿ.ಕೆ,ಶ್ರೀಮತಿ ಪೂರ್ಣಿಮಾ ಪಿ.ಎಸ್,ಕುಮಾರಿ ಪ್ರಜ್ಞಾ ಶರ್ಮಾ ಕೆ.ಎಸ್,ಕುಮಾರಿ ಪೃಥ್ವಿ ಶರ್ಮಾ ಕೆ.ಎಸ್ ಇವರುಗಳು ಭಾಗವಹಿಸಿರುತ್ತಾರೆ.ವೀಕ್ಷಕ ಭಾಂದವರು ಇದರ ಸದುಪಯೋಗವನ್ನು ಪಡೆಯುವಂತೆ ಕೋರಲಾಗಿದೆ.
No comments:
Post a Comment