ಸಂಸ್ಕಾರಗಳ ಆಚರಣೆಯ ಹಿಂದೆ ವೈಜ್ಞಾನಿಕ ಹಿನ್ನಲೆ ಇದೆ.
ಡಾ|| ರಾಘವೇಂದ್ರ ಗುರೂಜಿ
ದಾವಣಗೆರೆ ಜ.೩೧
ನಮ್ಮ ಪರಂಪರೆಯ ಹಿರಿಯರು ಆಚರಣೆಗೆ ತಂದಿರುವ ಎಲ್ಲಾ ಸಂಸ್ಕಾರ ಮತ್ತು ಸಂಸ್ಕೃತಿಗಳಲ್ಲಿ ಸಂಪ್ರದಾಯದ ಜೊತೆಗೆ ವೈಜ್ಞಾನಿಕ ಹಿನ್ನೆಲೆ ಇದೆ.ಉದಾಹರಣೆಗೆ ನಮಸ್ಕಾರ ಮಾಡುವುದು,ಪ್ರದಕ್ಷಿಣೆ ಹಾಕುವುದು,ಮಂಗಳಾರತಿ ತೆಗೆದುಕೊಳ್ಳುವುದು,ವಿವಿಧ ಹಬ್ಬಗಳನ್ನು ಅಚರಿಸುವುದು ಇವೆಲ್ಲವುಗಳ ಹಿಂದೆ ವೈಜ್ಞಾನಿಕ ಹಿನ್ನಲೆಯ ಮೂಲಕ ಉತ್ತಮ ಆರೋಗ್ಯದ ಗುಟ್ಟು ಇರುವುದು ಎಂದು ಆದರ್ಶ ಯೋಗ ಪ್ರತಿಷ್ಠಾನದ ಯೊಗಗುರು ಡಾ|| ರಾಘವೇಂದ್ರ ಗುರೂಜಿ ಹೇಳಿದರು.
ಅವರು ಇಂದು ದಾವಣಗೆರೆ ಜಿಲ್ಲೆಯ ಜಗಳುರು ತಾಲ್ಲೂಕಿನ ಸೊಕ್ಕೆ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ರಥಸಪ್ತಮಿ ಪ್ರಯುಕ್ತ ಶಾಲಾ ಮಕ್ಕಳಿಗಾಗಿ ಬ್ರಹತ್ ಸೂರ್ಯನಮಸ್ಕಾರ ಯೋಗ ಯಜ್ಞ ಹಾಗು ಶೈಕ್ಷಣಿಕ ಪ್ರಗತಿಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪಾತ್ರವೆಂಬ ವಿಷಯ ಕುರಿತು ಬರುವ ಫೆಬ್ರವರಿಯಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪೂರ್ವ ಸಮ್ಮೇಳನದ ಅಂಗವಾಗಿ ಮಾತನಾಡಿದರು.
ಜಗತ್ತಿಗೆ ಚೈತನ್ಯವನ್ನು ನೀಡುವ,ಕಣ್ಣಿಗೆ ಕಾಣುವ ನಿಜವಾದ ದೆವರು ಸೂಂii,ನಮಸ್ಕಾರವನ್ನು ಮಡುವಾಗ ಪ್ರದಕ್ಷಿಣೆ ಸಂದರ್ಭದಲ್ಲಿ ಹೃದಯದ ಒತ್ತಡವು ಕಡಿಮೆಯಾಗಿ ಶುದ್ಧ ರಕ್ತವು ಹೃದಯಕ್ಕೆ ಸರಬರಾಜಾಗುವುದು,ಹಾಗೆಯೇ ಧೀರ್ಘದಂಡ ನಮಸ್ಕಾರ ಹಾಕಿದಾಗ ತಲೆಯಬಾಗದಲ್ಲಿ ರಕ್ತ ಸರಬರಾಜು ವ್ಯವಸ್ತೆ ಯೆತೇಚ್ಚವಾಗಿ ನಡೆಯುವ ಸಲುವಾಗಿ ಮೆದುಳು ಚುರುಕಾಗಿ ಏಕಾಗ್ರತೆ,ನೆನಪಿನ ಶಕ್ತಿ ವೃದ್ಧಿಯಾಗುತ್ತದೆ ಇವೆಲ್ಲ ವೈಜ್ಞಾನಿಕ ಕಾರಣಗಳ ಜೊತೆಗೆ ಸಂಪ್ರದಾಯವೆಂಬ ಪದ್ಧತಿಯನ್ನು ಹಿರಿಯರು ನಮ್ಮ ಆರೋಗ್ಯವನ್ನು ಸುಸ್ತಿತಿಯಲ್ಲಿಟ್ಟುಕೊಳ್ಳಲು ಆಚರಣೆಗೆ ತಂದರು ಎಂದು ವಿದ್ಯಾರ್ಥಿಗಳ ಏಕಾಗ್ರತೆ ಮತ್ತು ನೆನಪಿನ ಶಕ್ತಿ ವೃದ್ಧಿಯಾಗಲು ಕರ್ಣಚೈತನ್ಯ ಯೋಗ,ಒಂದೇ ಮಾತರಂ ಚಪ್ಪಾಳೆ ಹೀಗೇ ಹಲವು ಚೇತೊಹಾರಿ ವಿಷಯಗಳನ್ನು ಮಕ್ಕಳ ಶೈಕ್ಷಣಿಕ ಕೌಶಲ ಅಭಿವೃದ್ದಿಗೆ ಸಹಕಾರಿಯಾಗುವ ಅನೇಕ ಯೋಗಪದ್ಧತಿಗಳನ್ನು ಪ್ರಾಯೋಗಿಕವಾಗಿ ಮಕ್ಕಳಿಗೆ ಹೇಳಿಕೊಡಲಾಯಿತು ಹಲವು ಉಪಯುಕ್ತ ಆಸನಗಳನ್ನು ಯೋಗ ಶಿಕ್ಷಕ ಶಂಭುಲಿಂಗಯ್ಯ ಹಿರೇಮಠ್ ಪ್ರದರ್ಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪ.ಅಧ್ಯಕ್ಷರಾದ ಹೆಚ್.ಟಿ. ಶ್ರೀನಿವಾಸ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿಯ ಅಧ್ಯಕ್ಷರಾದ ಜಿ.ಮಂಜುನಾಥ್,ವೀರಭದ್ರೇಶ್ವರ ಮೆಡಿಕಲ್‌ನ ಕೆ.ನಾಗಭೂಷಣ್,ಹಾಗೂ ಕೆ.ಹೆಚ್ ಬೀಮಪ್ಪ ನಾಯಕ,ಹೆಚ್.ಎಂ.ಕೊಟ್ರಯ್ಯ,ತಿಪ್ಪೇಸ್ವಾಮಿ,ಸದಸ್ಯರಾದ ರಂಗಪ್ಪ,ಮಾರಪ್ಪ ನಾಯಕ,ಸಿದ್ಧಣ್ಣ,ಹನುಮಂತಪ್ಪ,ಸಿದ್ಧಮ್ಮ,ಲಕ್ಷ್ಮಿ,ನಾಗರಾಜ,ಮುಖ್ಯ ಶಿಕ್ಷಕರಾದ ಷಡಾಕ್ಷರಪ್ಪ,ಸೋಮಣ್ಣ,ದೈಹಿಕ ಶಿಕ್ಷಕ ಕಾಂತರೆಡ್ಡಿ,ಕುಮಾರ್ ಮಾಸ್ತರ್,ಶಿಕ್ಷಕರಾದ ಡಿ.ಹೆಚ್.ಬಸಪ್ಪ,ಶೈಲಜ,ಸುನಂದ ಇವರುಗಳು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಶಾಲಾ ಮಕ್ಕಳಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಗ್ರಾ.ಪ.ಸದಸ್ಯ ಬಿ.ಭೋಜಪ್ಪ ಡಾ|| ಗುರೂಜಿಯವರ ಪರಿಚಯದೊಂದಿಗೆ ಎಲ್ಲರನ್ನೂ ಸ್ವಾಗತಿಸಿ,ಕೊನೆಯಲ್ಲಿ ವಂದಿಸಿ,ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.ಈ ಸಂದರ್ಭದಲ್ಲಿ ಗುರೂಜಿಯವರನ್ನು ಶಾಲುಹೊದಿಸಿ ಸನ್ಮಾನಿಸಿದರು ಕಾರ್ಯಾಗಾರದಲ್ಲಿ ಶ್ರೀ ಮಾರುತಿ ಗ್ರಾಮಾಂತರ ಪ್ರೌಡಶಾಲೆ,ಅಂಬೇಡ್ಕರ್ ಪ್ರೌಡಶಾಲೆ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೧೦೦೦ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ರಥಸಪ್ತಮಿಯ ಕಾರ್ಯಕ್ರಮವನ್ನು ಸೂರ್ಯನಮಸ್ಕಾರ ಯೋಗಪದ್ಧತಿಯನ್ನು ಪ್ರದರ್ಶಿಸಿ ಗ್ರಾಮದ ಸಭಿಕರ ಗಮನ ಸೆಳೆದರು.
No comments:
Post a Comment