Tuesday, December 2, 2014

ಯೋಗಾಭ್ಯಾಸದಿಂದ ಮಕ್ಕಳು ಮೇಧಾಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ದಾವಣಗೆರೆ. ಡಿ.೦೨


            ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಯೋಗಶಾಸ್ತ್ರವನ್ನು ಅಭ್ಯಾಸ ಮಾಡುವುದರಿಂದ ತಮ್ಮಲ್ಲೇ ಹುದುಗಿರುವ ಆಂತರಿಕ ಶಕ್ತಿಯಾದ ಮೇಧಾ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಬಹುದು ಎಂದು ಆದರ್ಶ ಯೋಗ ಪ್ರತಿಷ್ಠಾನ (ರಿ). ದಾವಣಗೆರೆಯ ಯೋಗಗುರು ಡಾ.ರಾಘವೇಂದ್ರ ಗುರೂಜಿ ಹೇಳಿದರು.
              ಅವರು ಇಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವ್ರದ್ದಿ ಇಲಾಖೆ ಚಿಕ್ಕಮಗಳೂರು, ಸಹರಾ ಸಂಸ್ಥೆ ಶೃಂಗೇರಿ ಇವರ ಸಂಯುಕ್ತಾಶ್ರಯದಲ್ಲಿ ಶೃಂಗೇರಿ ತಾಲ್ಲೂಕು ಮಟ್ಟದ ಮಕ್ಕಳಿಗಾಗಿ ಏರ್ಪಡಿಸಿದ ಕಾವ್ಯಕಮ್ಮಟ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು.
              ಪ್ರಕೃತಿ ಮತ್ತು ಮನುಷ್ಯನ ನಡುವೆ ಹೇಗೆ ಅವಿನಾಭಾವ ಸಂಬಂಧವಿದೆಯೋ ಹಾಗೆಯೇ ಶರೀರ ಮತ್ತು ಮನಸ್ಸಿನ ನಡುವೆಯೂ ಅತ್ಯಂತ ನಿಕಟವಾದ ಸಂಬಂಧವಿದೆ. ಜಡವಾದ ಶರೀರ, ಚಂಚಲವಾದ ಮನಸ್ಸು ಇವೆರಡನ್ನು ಒಂದುಗೂಡಿಸಿ ತಮ್ಮಲ್ಲಿರುವ ಮೇಧಾ ಶಕ್ತಿಯನ್ನು ದ್ಡಿಗುಣಗೊಳಿಸಿ ಶ್ಶೆಕ್ಷಣಿಕ ಮಟ್ಟದಲ್ಲಿ ವಿಕಾಸ ಹೊಂದಲು ಯೋಗಾಭ್ಯಾಸವು ಅತ್ಯಂತ ಸಹಾಕಾರಿಯಾಗಿದೆ. ಕಾವ್ಯಕಮ್ಮಟದಲ್ಲಿ ಭಾಗವಹಿಸಿದ ಶಾಲಾ ಮಕ್ಕಳಿಗೆ ಮೇಧಾಶಕ್ತಿ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸಿ ಏಕಾಗ್ರತೆಯನ್ನು ಪಡೆಯುವ ಅನೇಕ ಸರಳ ವಿಧಾನಗಳನ್ನು ಪ್ರಾತ್ಯಕ್ಷಿಕಯ ಮೂಲಕ ತಿಳಿಸಿ ಅಭ್ಯಾಸ ಮಾಡಿಸಿದರು.
               ಮುಖ್ಯ ಅತಿಥಿಗಳಾಗಿ ಆಗಮಿಸಿದ ಶೃಂಗೇರಿ ಅರಕ್ಷಕ ಇಲಾಖೆಯ ವೃತ್ತನಿರೀಕ್ಷಕರಾದ ಸುಧೀರ ಎಂ ಹೆಗಡೆ ಮಾತನಾಡಿ ಮಕ್ಕಳನ್ನು ಚಿಕ್ಕವಯಸ್ಸಿನಲ್ಲಿಯೇ ತಂದೆ ತಾಯಂದಿರು ಅತ್ಯಂತ ಜವಾಬ್ದಾರಿಯಿಂದ ಬೆಳಸುವುದರ ಜೊತೆಗೆ ಉತ್ತಮ ಸಂಸ್ಕಾರವನ್ನು ಕೊಡಬೇಕು. ಅಲ್ಲದೆ ಮಕ್ಕಳು ತಮ್ಮ ಶ್ಶೆಕ್ಷಣಿಕ ಮಟ್ಟದಲ್ಲಿಯೇ ಭವಿಷ್ಯದ ಗುರಿಯನ್ನು ಹೊಂದಿರಬೇಕು. ತಮಗಿಷ್ಟವಾದ ಕ್ಷೇತ್ರದಲ್ಲಿ ಮುಂದುವರಿಯಲು ಸೂಕ್ತವಾದ ಶಿಕ್ಷಣ ಮಾಧ್ಯಮವನ್ನು ಆಯ್ಕೆಮಾಡಿ ಅದರಲ್ಲಿ ಸಾಧನೆಯ ಗುರಿಯನ್ನು ಹೊಂದಬೇಕು ಎಂದು ತಿಳಿಸುತ್ತ ತಮ್ಮ ಬಾಲ್ಯದ ವಿದ್ಯಾರ್ಥಿ ದಿನಗಳನ್ನು ನೆನೆದು ಪೋಲೀಸ್ ಅಧಿಕಾರಿಯಾದ ಬಗೆಯನ್ನು ಮಕ್ಕಳಿಗೆ ಮನ ಮುಟ್ಟುವಂತೆ ಕೆಲವು ನೈಜ ಘಟನೆಗಳನ್ನು ಸಹ ಹೇಳಿದರು.
            ಮತ್ತೋರ್ವ ಮುಖ್ಯ ಅತಿಥಿ ಶೃಂಗೇರಿಯ ಕಲಾವಿದ ರಮೇಶ್ ಬೇಗಾರ್ ಮಾತನಾಡಿ ಕಲೆಯನ್ನು ರೂಡಿಸಿಕೊಂಡಾಗ ಮಕ್ಕಳ ಮನಸ್ಸಿನ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಹಾಗೂ ಅದರ ಲಾಭಗಳನ್ನು ತಿಳಿಸಿ ಕೊಟ್ಟರು.
            ಸಹರಾ ಸಂಸ್ಥೆಯ ಮುಕ್ಯಸ್ತ ಡಾ.ಉಮೇಶ್ ರವರು ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಪ್ತ ಸಹಾಯಕಿ ಭವ್ಯ ಎಲ್ಲರನ್ನು ಸ್ವಾಗತಿಸಿ ನಿರೂಪಿಸಿದರು. ಸಂಸ್ಥೆಯ ಕಾರ್ಯಕರ್ತೆ ರಮ್ಯಾ  ಎಲ್ಲರನ್ನೂ ವಂದಿಸಿದರು. ಕೊನೆಯಲ್ಲಿ ಶಾಲಾ ಮಕ್ಕಳಿಗೆ ಪ್ರಶಸ್ತಿಪತ್ರವನ್ನು ವಿತರಿಸಲಾಯಿತು. ಹಿರಿಯರಾದ ಮುದೇನೂರಿನ ರಾಜಶೇಖರ ಕರೇಗೌಡ, ವೀಣಾ ಮತ್ತು ಸಂದೇಶ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 

Sunday, February 17, 2013

ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮಾನಸಿಕ ಸ್ಥಿರತೆ ಬಹುಮುಖ್ಯ

ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮಾನಸಿಕ ಸ್ಥಿರತೆ ಬಹುಮುಖ್ಯ
-ಡಾ|| ರಾಘವೇಂದ್ರ ಗುರೂಜಿ
ದಾವಣಗೆರೆ ಫೆ. 17



ಇಂದು ಪ್ರತಿಯೊಬ್ಬರಲ್ಲಿಯೂ ಮಾನಸಿಕ ಸ್ಥಿರತೆಯ ಕೊರತೆಯಿದೆ. ಚಂಚಲವಾದ ಮನಸ್ಸನ್ನು ಹತೋಟಿಗೆ ತರುವುದು ಸುಲಭದ ಮಾತಲ್ಲ, ತನ್ನಲ್ಲಿರುವ ಅಂತಃಶಕ್ತಿಯನ್ನು ಜಾಗೃತಗೊಳಿಸಿ ಮಾನಸಿಕ ಸ್ಥಿರತೆಯನ್ನು ಹೊಂದಿಸಿಕೊಂಡಾಗ ಮಾತ್ರ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿದೆ ಎಂದು ಯೋಗಗುರು ಡಾ|| ರಾಘವೇಂದ್ರ ಗುರೂಜಿ ತಿಳಿಸಿದರು.

ಅವರು ಇಂದು ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಪದವಿ ಮಹಾ ವಿದ್ಯಾಲಯದಲ್ಲಿ ರಥಸಪ್ತಮಿಯ ಪ್ರಯುಕ್ತ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ 'ಮನಃಶಕ್ತಿಯ ವರ್ಧನೆ ಹಾಗು ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮಾನಸಿಕ ಸಿದ್ಧತೆ' ಎಂಬ ಕಾಯರ್ಾಗಾರವನ್ನು ಉದ್ಘಾಟಿಸಿ ಉಪನ್ಯಾಸ ನೀಡಿದರು.

ಮನುಷ್ಯ ಉತ್ತಮ ನಾಗರಿಕನಾಗಬೇಕಾದರೆ ತನ್ನ ಜೀವನ ಶೈಲಿಯಲ್ಲಿ ಕೆಲವು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಇದು ಮನಃಶಕ್ತಿಯ ಸಂಕಲ್ಪದಿಂದ ಮಾತ್ರ ಸಾಧ್ಯ ನಮ್ಮ ಎಲ್ಲಾ ಆಗು ಹೋಗುಗಳಿಗೆ ಮನಸ್ಸೇ ಮೂಲ ಕಾರಣ. ಆಂಗ್ಲ ಭಾಷೆಯಲ್ಲಿ ಹೇಳುವಂತೆ 'Bending Of the Mind is More importent then Bending Of the Body'ಎಂಬಂತೆ ದೇಹ ಬಾಗಿಸುವುದಕ್ಕಿಂತಲೂ ಮುಖ್ಯವಾಗಿ ಮನಸ್ಸನ್ನು ಬಾಗಿಸಬೇಕು, ಸದಾ ಸಕಾರಾತ್ಮಕ ಚಿಂತನೆಯಿಂದ ಭಯವನ್ನು ದೂರಮಾಡಿ ಧೈರ್ಯದಿಂದ ಮುನ್ನುಗ್ಗಿದರೆ ಯಶಸ್ಸು ಕಾಣಬಹುದು ಎಂದರಲ್ಲದೆ ಮನಸ್ಸು ಮತ್ತು ಶರೀರಕ್ಕೆ ಇರುವ ಅವಿನಾಭಾವ ಸಂಭಂಧಗಳೊಂದಿಗೆ ಚಟುವಟಿಕೆ ಮೂಡಿಸುವ ಹಲವು ಕೌಶಲ್ಯಗಳ ಮೂಲಕ ಮನಸ್ಸನ್ನು ಶಾಂತಗೊಳಿಸುವ, ಉದ್ವೇಗ ದೂರಮಾಡುವ ವಿಧಾನಗಳನ್ನು ತಿಳಿಸಿಕೊಟ್ಟರು.

ನಂತರ ಬಾಪೂಜಿ ಹೈಟೆಕ್ ಕಾಲೇಜಿನ ಗಣಕಯಂತ್ರ ಪ್ರೊ|| ಮುನೋಳಿ ಮಠ್ ಹಾಗು ಕೆ.ಎಸ್ ಬಕ್ಕೇಶ್ ಇವರುಗಳು 'ಸ್ಪಧರ್ಾತ್ಮಕ ಪರೀಕ್ಷೆಗಳ ಪೂರ್ವಸಿದ್ಧತೆ ಹಾಗು ಭಾಷಾ ವ್ಯವಹಾರಿಕ ಕೌಶಲ್ಯಗಳು' ಎಂಬ ವಿಷಯವಾಗಿ ಮಾತನಾಡಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಕುಸುಮದೇವಿ ಸಜ್ಜನ್ ಉಪಸ್ಥಿತರಿದ್ದರು. 

ಪ್ರಾರಂಭದಲ್ಲಿ ಕು|| ಅರುಂಧತಿ ಪ್ರಾತಿಸಿದರು, ಕಾರ್ಯಕ್ರಮದ ಮುಖ್ಯ ರುವಾರಿ ಪ್ರಭಾರಿ ಪ್ರೊ|| ಆಲೂರು ನಾಗರಾಜ್ ಪ್ರಾಸ್ತಾವಿಕ ನುಡಿಯೊಂದಿಗೆ ಎಲ್ಲರನ್ನು ಸ್ವಾಗತಿಸಿದರು, ಕೊನೆಯಲ್ಲಿ ಡಾ|| ಎನ್.ಜಗನ್ನಾಥ ಎಲ್ಲರಿಗೂ ವಂದಿಸಿ, ಅತಿಥಿಗಳಿಗೆ ಶಾಲು ಹೊದಿಸಿ ಗೌರವಿಸಿದರು. ಪ್ರೊ|| ಬಿ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಸಿಬ್ಬಂದಿ ವರ್ಗ ಹಾಗು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Wednesday, August 15, 2012

Kanchikere Yoga Workshop


ತ್ರಿಕರಣ ಶುದ್ಧಿಯು ಅಷ್ಟಾಂಗ ಯೋಗದ ಮೂಲ ತತ್ತ್ವ
-      ಡಾ|| ರಾಘವೇಂದ್ರ ಗುರೂಜಿ
ದಾವಣಗೆರೆ ಆ ೧೪
ಮಾಡುವ ಕೆಲಸದಲ್ಲಿ, ಮಾತನಾಡುವ ನಾಲಿಗೆಯಲ್ಲಿ, ನೋಡುವ ಮನಸ್ಥಿತಿಯ ನೋಟದಲ್ಲಿ ಶುದ್ಧತೆ, ಬದ್ಧತೆ, ಪ್ರಾಮಾಣಿಕತೆ, ಪರೋಪಕಾರಿ ಮನೋಭಾವಗಳಿಂದ ಕೂಡಿದ ಕಾಯ ವಾಚಾ ಮನಸ ಇವುಗಳಿಂದ ಕೂಡಿದ ತ್ರಿಕರಣ ಶುದ್ಧಿಯು ಅಷ್ಟಾಂಗ ಯೋಗದ ಮೂಲ ತತ್ವವಾಗಿದೆ ಎಂದು ಆದರ್ಶ ಯೋಗ ಪ್ರತಿಷ್ಠಾನದ ಯೋಗ ಗುರು ಡಾ|| ರಾಘವೇಂದ್ರ ಗುರೂಜಿ ತಿಳಿಸಿದರು.
ಅವರು ಇತ್ತೀಚೆಗೆ ಕಂಚೀಕೆರೆ ಶ್ರೀ ಕೋಡೀ ಸಿದ್ಧೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಆಯುಷ್ ಇಲಾಖೆ ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆ ದಾವಣಗೆರೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಶಿಕ್ಷಕರಿಗೆ ಯೋಗ ಪ್ರಶಿಕ್ಷಣ ಕಾರ್ಯಾಗಾರದಲ್ಲಿ ಅಷ್ಟಾಂಗ ಯೋಗ ಎಂಬ ವಿಷಯದ ಕುರಿತು ಉಪನ್ಯಾಸ ಮಂಡಿಸಿದರು.

ಅಷ್ಟಾಂಗ ಯೋಗವು ಮನುಷ್ಯನ ಬಹಿರಂಗ ಮತ್ತು ಅಂತರಂಗಗಳ ಶುದ್ಧಿಯನ್ನು ತಿಳಿಸುವ ಅಂಶಗಳ ಜೊತೆಗೆ ಶರೀರ ಮತ್ತು ಮನಸ್ಸಿನ ಸಮತೋಲನವನ್ನು ಸಾಧಿಸಲು ಬೇಕಾಗುವ ಮೂಲ ತತ್ತ್ವಾಂಶಗಳನ್ನು ನಮಗೆ ತಿಳಿಸಿಕೊಡುವುದರ ಜೊತೆಗೆ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಇವುಗಳ ಸಂಕ್ಷಿಪ್ತ ಪರಿಚಯವನ್ನು ತಿಳಿಸಿಕೊಟ್ಟರು. ಹಾಗು ಷಟ್ಚಕ್ರಗಳು ಮತ್ತು ಧ್ಯಾನದ ಪರಿಚಯದೊಂದಿಗೆ ಧ್ಯಾನ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

ಕಾರ್ಯಾಗಾರದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮುಖ್ಯಸ್ಥ ರಾಘವೇಂದ್ರ ಪ್ರಭು ಎಲ್ಲರನ್ನೂ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ತಪೋವನದ ಡಾ|| ವಿನಂiiಕ ಅಂಬರ್ಕರ್ ಮತ್ತು ಡಾ|| ಸುರೇಂದ್ರ, ಡಾ|| ಶ್ವೇತ, ಡಾ|| ನಾಗರಾಜ್ ಹೊಸಮನಿ, ಡಾ|| ಶಿವಕುಮಾರ್, ಡಾ|| ಸುಚಿತ್ರ ಹಾಗು ಆಯುಷ್ ಇಲಾಖೆಯ ಡಾ|| ಯು ಸಿದ್ಧೇಶ್ರವರು ಉಪಸ್ಥಿತರಿದ್ದರು
                             

Jaganath Achari


ಅದ್ಭುತ ಮುಖವರ್ಣಿಕೆಯೊಂದಿಗೆ ರಾಕ್ಷಸರೂಪವನ್ನು ಅನಾವರಣಗೊಳಿಸಿದ ಹಿರಿಯ ಕಲಾವಿದ ಜಗನ್ನಾಥ ಆಚಾರಿ ಯಳ್ಳಂಪಳ್ಳಿ


ಆದರ್ಶ ಯೋಗ ಪ್ರತಿಷ್ಠಾನದ ವತಿಯಿಂದ ಮಲ್ಲಾಡಿಹಳ್ಳಿ ಪರಮಪೂಜ್ಯ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿ ಸಂಸ್ಮರಣೆ ನಿಮಿತ್ತ ೧೬ನೇ ವಾರ್ಷಿಕ ಉಚಿತ ಚೈತನ್ಯ ಯೋಗ ಶಿಬಿರದ ಸಮಾರೋಪ ಸಮಾರಂಭ, ೨೦೧೨ ಪ್ರತಿಷ್ಟಿತ ತಿರುಕ ಶ್ರೀ ರಾಜ್ಯ ಗೌರವ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅಂತರ್ರಾಷ್ಟ್ರೀಯ ಪ್ರಸಿದ್ಧ ಯಕ್ಷಗಾನ ಬಣ್ಣದ ವೇಷದ ಕಲಾವಿದರಾದ ಜಗನ್ನಾಥ ಆಚಾರಿ, ಯಳ್ಳಂಪಳ್ಳಿ ಹಾಗು ಹಾಸ್ಯ ಕಲಾವಿದರಾದ ಲಕ್ಷ್ಮಣ ಭಂಡಾರಿ, ಹೊಸಂಗಡಿ ಇವರುಗಳಿಂದ ಅಮೋಘ ಯಕ್ಷಗಾನ ನೃತ್ಯ ಕಲಾ ವೈಭವ ಕಾರ್ಯಕ್ರಮ ನಡೆಯಿತು.

ರಾಕ್ಷಸ ಹಾಗು ರಾವಣನ ವೇಷಧಾರಿಯಾಗಿ ಹಳೇ ನಡೆಯ ಸಂಪ್ರದಾಯ ಬದ್ಧವಾಗಿ ರಂಗಸ್ಥಳವನ್ನು ಪ್ರವೇಶ ಮಾಡುವ ವೈಖರಿ ಮತ್ತು ಬೆಳಿಗ್ಗೆ ಎದ್ದು, ಹಲ್ಲು ಉಜ್ಜಿ, ಕೈಕಾಲು ಮುಖ ತೊಳೆದು, ಸ್ನಾನ ಮಾಡಿ, ಶಿವ ಪೂಜೆಯನ್ನು ಮಾಡುವ ಸನ್ನಿವೇಶ ಹಾಗು ಮೃಘ ಬೇಟೆಗಾಗಿ ತೆರಳುವ ವಿಶೇಷ ಸನ್ನಿವೇಶಗಳೊಂದಿಗೆ ಜಗನ್ನಾಥ ಆಚಾರಿಯವರು ತಮ್ಮ ಅಭಿನಯ ಸಾಮಾರ್ಥ್ಯವನ್ನು ರಂಗದಲ್ಲಿ ಪ್ರದರ್ಶಿಸಿದರು, ಜೊತೆಯಲ್ಲಿ ಯಕ್ಷಗಾನದಲ್ಲಿ ಬರುವ ಹಾಸ್ಯ ಸನ್ನಿವೇಶಗಳಾದ ಪೂಜೆಗೆ ಹೋಗುವ ಕಾಶಿ ಮಾಣಿಯ ಪಾತ್ರ ಘಟೋತ್ಕಜನ ದೂತನ ಪಾತ್ರ ಇನ್ನಿತರ ಹಾಸ್ಯ ಸನ್ನಿವೇಶಗಳಲ್ಲಿ ಹೊಸಂಗಡಿ ಲಕ್ಷ್ಮಣ ಭಂಡಾರಿಯವರು ಹಾಸ್ಯದ ಹೊನಲನ್ನು ಹರಿಸಿದ ಸನ್ನಿವೇಷಗಳೆಲ್ಲವೂ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದವು. ಪ್ರಾರಂಭದಲ್ಲಿ ಬಾಲಗೋಪಾಲರ ಪಾತ್ರದಲ್ಲಿ ನಗರದ ಕುಮಾರಿ ಭಾವನ ಹಾಗು ಕುಮಾರಿ ವಿದ್ಯಾಶ್ರೀ ಎಸ್.ಏಕಭೋಟೆ ಮನೋಜ್ಞವಾಗಿ ಯಕ್ಷಗಾನದ ಹಲವು ಹೆಜ್ಜೆಯೊಂದಿಗೆ ನೃತ್ಯ ಪ್ರದರ್ಶನ ಮಾಡಿದರು. ಇದಕ್ಕೆ ಪೂರಕವಾಗಿ ರಾಘವೇಂದ್ರ ಮುದ್ದುಮನೆಯವರ ಶ್ರುಶ್ರಾವ್ಯವಾದ ಯಕ್ಷಸಂಗೀತಕ್ಕೆ ಕೇಶವ ನಾಯಕ್ ಯಳ್ಳಂಪಳ್ಳಿ ಮದ್ದಳೆ, ಪ್ರದೀಪ್ ಕೆ.ವಿ ಬಾಳೆಹೊಳೆ ಇವರು ಚಂಡೆಯನ್ನು ನುಡಿಸಿ ಸಾತ್ ನೀಡಿದರು. ಕರಾವಳಿ ಮೂಲದ ಕಲೆಯಾದ ಯಕ್ಷಗಾನವು ವಿದ್ಯಾನಗರಿಯಾದ ದಾವಣಗೆರೆಯಲ್ಲಿ ನೋಡುಗರ ಮನಸೆಳೆದು ಮೆಚ್ಚುಗೆಗೆ ಪಾತ್ರವಾಯಿತು.

Sunday, August 12, 2012

TirukaShree State Award Ceremony


2012ರ ಪ್ರತಿಷ್ಟಿತ ತಿರುಕ ಶ್ರೀ ಗೌರವ ಪುರಸ್ಕಾರ ಪ್ರದಾನ
ಮನಸ್ಸಿನ ಕಡಿವಾಣ ಯೋಗದಿಂದ ಮಾತ್ರ ಸಾಧ್ಯ.
-       ಪೂಜ್ಯ ಶ್ರೀ ಶಿವಾನಂದ ಸ್ವಾಮೀಜಿ

ದಾವಣಗೆರೆ ಆ 12
ಎಲ್ಲವಕ್ಕೂ ಕಡಿವಾಣವಿದೆ ಆದರೆ ಮನಸ್ಸಿಗೆ ಮಾತ್ರ ಯಾವುದೇ ಕಡಿವಾಣ ಹಾಕುವುದು ಕಷ್ಟ ಸಾಧ್ಯ, ಮನಸ್ಸಿಗೆ ಕಡಿವಾಣವನ್ನು ಹಾಕಲು ಯೋಗದಿಂದ ಮಾತ್ರ ಸಾಧ್ಯ ಎಂದು ನಗರದ ಶ್ರೀ ಜಡೇಸಿದ್ದ ಶಿವಯೋಗೀಶ್ವರ ಶಾಂತಾಶ್ರಮದ ಪೂಜ್ಯ ಶ್ರೀ ಶ್ರೀ ಶಿವಾನಂದ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಸಂಜೆ ನಗರದ ಆರ್.ಹೆಚ್. ಗೀತಾಮಂದಿರದಲ್ಲಿ ಆದರ್ಶ ಯೋಗ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿ ಸಂಸ್ಮರಣೆ ನಿಮಿತ್ತ ೧೬ನೇ ವಾರ್ಷಿಕ ಉಚಿತ ಚೈತನ್ಯ ಯೋಗ ಶಿಬಿರದ ಸಮಾರೋಪ, ೨೦೧೨ರ ರಾಜ್ಯ ತಿರುಕ ಶ್ರೀ ಗೌರವ ಪುರಸ್ಕಾರ ಹಾಗು ಅಮೋಘ ಯಕ್ಷಗಾನ ನೃತ್ಯ ಕಲಾ ವೈಭವ ಸಮಾರಂಭದ ಸಾನ್ನಿದ್ಯ ವಹಿಸಿ ಮಾತನಾಡಿದರು.

ನಾವು ಆರೋಗ್ಯವಾಗಿರಬೇಕಾದರೆ ನಮ್ಮ ಶರೀರ ಮತ್ತು ಮನಸ್ಸು ಸಮತೋಲನದಲ್ಲಿರಬೇಕು, ಪತಂಜಲೀ ಮಹರ್ಷಿಗಳು ಹೇಳಿದ ೮ ಅಂಗಗಳ ಯೋಗಶಾಸ್ತ್ರ ಶರೀರ ಮತ್ತು ಮನಸ್ಸಿನ ಸಮತೋಲನವನ್ನು ಸಾಧಿಸುವ ಮಾರ್ಗ ತೋರಿಸುತ್ತದೆ. ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ಒಳ್ಳೆಯ ಭಾವನೆಗಳನ್ನು ಮೂಡಿಸಿ ಆತ್ಮಶುದ್ಧಿಗೊಳಿಸುತ್ತದೆ ಎಂದರು.

ತಿರುಕ ಶ್ರೀ ಗೌರವ ಪುರಸ್ಕಾರವನ್ನು ಸ್ವೀಕರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಶಾಂತಿವನ ಟ್ರಸ್ಟ್ನ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಪ್ರದಾನ ಕಾರ್ಯದರ್ಶಿ, ಯೋಗತಜ್ಞ, ಯೋಗ ಸಂಶೋಧಕ, .ಶಶಿಕಾಂತ್ ಜೈನ್ ಮಾತನಾಡಿ ಮನಸ್ಸು ಶಾಂತಿಯಿಂದ ಇದ್ದರೆ ಮುಖದಲ್ಲಿ ನಗುವನ್ನು ಕಾಣಬಹುದು.ಎಲ್ಲವನ್ನೂ ಖುಷಿಯಿಂದ ಅನುಭವಿಸಬೇಕು. ಸಕಾರಾತ್ಮಕ ಭಾವನೆಗಳಿಂದ ಆತ್ಮ ವಿಶ್ವಾಸವನ್ನು ಗಳಿಸಲು ಯೋಗ ಅತ್ಯಂತ ಸಹಕಾರಿ ಎಂದರಲ್ಲದೇ ಈ ಪುರಸ್ಕಾರವು ಶಾಂತಿವನ ಟ್ರಸ್ಟ್ ಹಾಗು ಡಾ|| ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅರ್ಪಿತವಾಗಿದೆ ಎಂದು ಭಾವನಾತ್ಮಕವಾಗಿ ನುಡಿದರು. ಮುಧಿನ ವರ್ಷದಿಂದ ನಮ್ಮ ಸಂಸ್ಥೆಯ ಮೂಲಕ ನಾಡಿನ ಯೋಗ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶವನ್ನು ಹೊಂದಿದೆ ಎಂಧು ಪ್ರಕಟಿಸಿದರು.

ಮುಖ್ಯ ಅತಿಥಿಗಳಾಗಿ ಬಾಪೂಜಿ ವಿದ್ಯಾ ಸಂಸ್ಥೆಯ ಸದಸ್ಯೆ ಶ್ರೀಮತಿ ಕಿರುವಾಡಿ ಗಿರಿಜಮ್ಮ ಮಾತನಾಡಿ ರಾಘವೇಂದ್ರ ಗುರೂಜಿಯವರು ಸಾವಿರಾರು ಮಕ್ಕಳಿಗೆ ಯೋಗ ಶಿಕ್ಷಣವನ್ನು ನೀಡುತ್ತಿರುವುದು ಉತ್ತಮ ಸೇವೆ ಎಂದರಲ್ಲದೇ ಒಳ್ಳೆಯ ನಡತೆಯನ್ನು ಕಲಿಸುವ ವಿದ್ಯೆ ಎಂದರು, ಶಸ್ತ್ರ ಚಿಕಿತ್ಸಾ ತಜ್ಞ ಡಾ|| ಬಿ.ಎಸ್. ನಾಗಪ್ರಕಾಶ್ ಬೊಜ್ಜು ಮೈಯಿಂದ ಬಳಲುತ್ತಿರುವವರಿಗೆ ಆಧುನಿಕ ಶಸ್ತ್ರ ಚಿಕಿತ್ಸಾ ವಿಧಾನಗಳಿದ್ದರೂ ಕೂಡಾ ಯೋಗಕ್ಕೆ ಮೊರೆ ಹೋಗುವುದು ಆರೋಗ್ಯಕ್ಕೆ ಒಳ್ಳೆಯದು ಎಂಬ ಕಿವಿಮಾತನ್ನು ತಿಳಿಸುತ್ತಾ, ಮುಂದಿನ ವರ್ಷದ ತಿರುಕ ಶ್ರೀ ಪುರಸ್ಕಾರದ ಸಂಪೂರ್ಣ ವೆಚ್ಚವನ್ನು ನಾನು ಭರಿಸುತ್ತೇನೆ ಎಂದು  ಭರವಸೆ ನೀಡಿದರು. ಸೇವಾಕರ್ತ ವೀರೇಶ್ ಬೆಳಕೇರಿ, ಶಾಂತಿವನ ಟ್ರಸ್ಟ್ನ ಪ್ರದಾನ ಕಾರ್ಯದರ್ಶಿ ಸೀತಾರಾಮ್ ತೋಳ್ಪಡಿತ್ತಾಯ ಮಾತನಾಡಿದರು.

ಪ್ರಾರಂಭದಲ್ಲಿ ಶಿವಯೋಗಿ ಹಿರೇಮಠ್ ರಚಿಸಿದ ಗುರುನಮನ ಗೀತೆಯನ್ನು ಗಾಯಕರಾದ ಜಗದೀಶ್ ಹಿರೇಮಠ್ ಸಂಗೀತ ಸಂಯೋಜಿಸಿ ಸಂಗಡಿಗರೊಂದಿಗೆ ಹಾಡಿದರು, ಯೋಗ ಶಿಕ್ಷಕ ಶಂಭುಲಿಂಗಯ್ಯ ಹಿರೇಮಠ್ ಎಲ್ಲರನ್ನೂ ಸ್ವಾಗತಿಸಿದ ನಂತರ ಡಾ|| ರಾಘವೇಂದ್ರ ಗುರೂಜಿ ಪ್ರಸ್ತಾವನೆ ಸಲ್ಲಿಸಿದರು, ಪುರಸ್ಕೃತರ ಪರಿಚಯ, ಸನ್ಮಾನ ಪತ್ರ ವಾಚನದೊಂದಿಗೆ ಯೋಗ ಶಿಕ್ಷಕ ವಿ.ಲಲಿತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ್ ಸಿ. ಕಣಕುಪ್ಪಿ ಕೊನೆಯಲ್ಲಿ ಎಲ್ಲರನ್ನೂ ವಂದಿಸಿದ ನಂತರ ನಾಡಿನ ಸುಪ್ರಸಿದ್ಧ ಬಣ್ಣದ ವೇಷದ ಯಕ್ಷಗಾನ ಕಲಾವಿದ ಜಗನ್ನಾಥ ಆಚಾರಿ ಯಳ್ಳಂಪಳ್ಳಿ ಹಾಗು ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದ ಲಕ್ಷ್ಮಣ ಭಂಡಾರಿ ಹೊಸಂಗಡಿ ಇವರ ತಂಡದಿಂದ ಅಮೋಘ ಯಕ್ಷಗಾನ ನೃತ್ಯ ಕಲಾ ವೈಭವ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು




Tuesday, August 7, 2012

Tirukashree Award 2012 I ShaShiKanth Jain


ತಿರುಕಶ್ರೀ ಗೌರವ ಪುರಸ್ಕಾರ - ೨೦೧೨

ಯೋಗ ಕ್ಷೇತ್ರದಲ್ಲಿ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಿರುವ ಮಹನಿಯರನ್ನು ಗೌರವಿಸಿ ಪುರಸ್ಕರಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಗ ತಜ್ಞ, ಯೋಗ ಸಂಶೋಧಕ ಶ್ರೀ ಐ. ಶಶಿಕಾಂತ್ ಜೈನ್ ಇವರು ಭಾಜನರಾಗಿರುತ್ತಾರೆತನ್ನಿಮಿತ್ತ ಈ ಲೇಖನ.

ಕಿರು ಪರಿಚಯ
ಮಾನ್ಯ ಶ್ರೀ ಐ. ಶಶಿಕಾಂತ್ ಜೈನ್ ಇವರು ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಈದು ಗ್ರಾಮದವರು. ಪ್ರಸ್ತುತ ಶ್ರೀ ಕ್ಷೇತ್ರ ಧರ್ಮಸ್ಥಳದ  ಶಾಂತಿವನ ಟ್ರಸ್ಟ್ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಪ್ರಧಾನ ನಿರ್ದೇಶಕರಾಗಿ ಕಳೆದ ೧೨ ವರ್ಷಗಳಿಂ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಎಂ.ಎಸ್ಸಿ., ಇನ್ ಯೋಗ ಸ್ನಾತಕೋತ್ತರ ಪದವಿ, ವಿವೇಕಾನಂದ ಯೋಗ ಕೇಂದ್ರ, ಜಿಗಣಿಯಲ್ಲಿ ಯೋಗ ಡಿಪ್ಲೋಮಾ ಪದವಿ ಪಡೆದಿದ್ದು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಯೋಗ ವಿಶಯವಾಗಿ (ಪಿಹೆಚ್.ಡಿ,.) ಸಂಶೋಧನೆಯಲ್ಲಿ ನಿರತರಾಗಿರುತ್ತಾರೆ.
ಶ್ರೀ ಕ್ಷೇತ್ರದ ಯೋಜನೆಯಡಿಯಲ್ಲಿ ನಗರ, ಪಟ್ಟಣ ಹಾಗು ಗ್ರಾಮೀಣ ಪ್ರದೇಶದಲ್ಲಿ ಲಕ್ಷಾಂತರ ಆಸಕ್ತರಿಗೆ ಯೋಗ ಮತ್ತು ನೈತಿಕ ಶಿಕ್ಷಣವನ್ನು ನೀಡುತ್ತಿರುವುದಲ್ಲದೇ, ,೪೮೧ಕ್ಕೂ ಹೆಚ್ಚು ಶಿಕ್ಷಕರಿಗೆ ಯೋಗ ಮತ್ತು ಮೌಲ್ಯ ಶಿಕ್ಷಣದ ತರಬೇತಿ ನೀಡಿರುತ್ತಾರೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹಲವು ಬಾರಿ ಯೋಗ ಪ್ರಭಂಧವನ್ನು ಮಂಡಿಸಿರುತ್ತಾರೆ. ರಾಷ್ಟ್ರೀಯ ಯೋಗಾಸನ ಸ್ಪರ್ಧೆಯ ತೀರ್ಪುಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಯೋಗ ಚಿಕಿತ್ಸಾ ಸಲಹೆಗಾರರಾಗಿ ಹಲವು ಧೀರ್ಘತರ ಖಾಯಿಲೆಗಳನ್ನು ಗುಣಪಡಿಸಿದ ದಾಖಲೆ ಇವೆ.
ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ನಾಡಿನಾದ್ಯಂತ ಯೋಗ ಸೇವೆಯಲ್ಲಿ ಅನವರತ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಸಮಾರಂಭವು ಆದರ್ಶ ಯೋಗ ಪ್ರತಿಷ್ಠಾನ (ರಿ.)ದ ವತಿಯಿಂದ ಇದೇ ಆಗಸ್ಟ್ ೨೦೧೨ನೇ ಶನಿವಾರ ಸಂಜೆ ೫:೩೦ರಿಂದ ನಗರದ ಪಿ.ಬಿ. ರಸ್ತೆಯಲ್ಲಿರುವ ಆರ್.ಹೆಚ್. ಗೀತಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ತದನಂತರ ಅಮೋಘ ಯಕ್ಷಗಾನ ನೃತ್ಯ ಕಲಾ ವೈಭವ, ಬಣ್ಣದ ವೇಷ ಹಾಗು ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಬನ್ನಿ ಯೋಗ ಕಲಾಪೋಷಕರನ್ನು ಪ್ರೋತ್ಸಾಹಿಸಿ, ಅಭಿನಂದಿಸಿರಿ.
-      ಡಾ|| ರಾಘವೇಂದ್ರ ಗುರೂಜಿ 

Saturday, August 4, 2012

Bannada Vesha


ಯೋಗ ಶಿಬಿರದ ಸಮಾರೋಪದಲ್ಲಿ ಬಣ್ಣದ ಒಡ್ಡೋಲಗ



ಭಾರತೀಯ ಪರಂಪರೆಯ ಜನಪದ ಕಲಾ ಪ್ರಕಾರಗಳಲ್ಲಿ ವಿಶೇಷವಾದ ಸ್ಥಾನ ಮಾನ್ಯತೆ ಪಡೆದು ಬಹುಬೇಗ ಜನರನ್ನು ತನ್ನತ್ತ ಆಕರ್ಷಿಸುವ ಯಕ್ಷಗಾನವು ಜನಪ್ರೀಯ ಕಲಾ ಮಾಧ್ಯಮ.ಯಕ್ಷಗಾನದಲ್ಲಿ ಸಂಗೀತ,ನೃತ್ಯ,ಸಾಹಿತ್ಯ ಮತ್ತು ಭಾವ ಚಿತ್ರಣ ಮುಂತಾದವುಗಳ ಸಾಮರಸ್ಯವಿದೆ.ಯಕ್ಷಗಾನ ಕಲೆಯ ಕಥಾ ಪ್ರದರ್ಶನದ ಸಂದರ್ಭ ನವರಸಗಳ ಭಾವಾಭಿನಯಕ್ಕೆ ವಿಫುಲ ಅವಕಾಶವಿದೆ.ಪುರಾಣ ಪ್ರಸಂಗಗಳಲ್ಲಿ ಬರುವ ರಾಕ್ಷಸ ಪಾತ್ರಗಳ  ಚಿತ್ರಣವೇ ಅದ್ಭುತ ಮಾಯಾಲೋಕ. ಈ ಪಾತ್ರಗಳ ಚಿತ್ರಣ ವಿಶೇಷ ಹಾಗು ಕ್ಲಿಷ್ಟಕರ.ಇಂಥ ವಿಶೇಷವಾದ ಪಾತ್ರ ಚಿತ್ರಣವನ್ನು ಪರಿಚಯಿಸುವ ಪ್ರಯತ್ನ ಇದೇ ೨೦೧೨ ಆಗಸ್ಟ್ ೧೧ರ ಶನಿವಾರ ಸಂಜೆ ೬:೦೦ ರಿಂದ ಆರ್.ಹೆಚ್. ಗೀತಾ ಮಂದಿರದಲ್ಲಿಆದರ್ಶ ಯೋಗ ಪ್ರತಿಷ್ಠಾನದ ೧೬ನೇ ವಾರ್ಷಿಕ ಯೋಗ ಶಿಬಿರದ ಸಮಾರೋಪ, ತಿರುಕ ಶ್ರೀ ಪುರಸ್ಕಾರ ಸಮಾರಂಭದಲ್ಲಿ ಆಯೋಜಿಸಲಾಗಿದೆ.

ಈ ವಿಶೇಷ ಕಲಾ ಪ್ರದರ್ಶನದಲ್ಲಿ ಶ್ರೀ ಮಂದಾರ್ತಿ ಮೇಳದ ಅಂತರ್ರಾಷ್ಟ್ರೀಯ  ಸುಪ್ರಸಿದ್ಧ ಬಣ್ಣದ ವೇಷದ ಕಲಾವಿದರಾದ ಶ್ರೀ ಜಗನ್ನಾಥ ಆಚಾರಿ, ಯಳ್ಳಂಪಳ್ಳಿ ಇವರು ಬಣ್ಣದ ವೇಷದ ವೈವಿಧ್ಯತೆಯನ್ನು ಅನಾವರಣಗೊಳಿಸಲಿದ್ದಾರೆ ಇವರ ಜೊತೆ ಅಮೃತೇಶ್ವರೀ ಮೇಳದ ಪ್ರಸಿದ್ಧ ಹಾಸ್ಯ ಕಲಾವಿದರಾದ ಶ್ರೀ ಲಕ್ಷ್ಮಣ ಭಂಡಾರಿ ಇವರು ಹಾಸ್ಯದ ಹೊನಲನ್ನು ಹರಿಸಲಿದ್ದಾರೆ.

ಹಿಮ್ಮೇಳದಲ್ಲಿ ಯುವ ಭಾಗವತರಾದ ಶ್ರೀ ರಾಘವೇಂದ್ರ ಮುದ್ದುಮನೆ, ಮದ್ದಳೆಗಾರರಾಗಿ ಶ್ರೀ ಕೇಶವ ನಾಯಕ್,ಯಳ್ಳಂಪಳ್ಳಿ, ಚಂಡೆ ನುಡಿಸುವಿಕೆಯಲ್ಲಿ ಶ್ರೀ ಪ್ರದೀಪ್ ಕೆ.ವಿ ಬಾಳೆಹೊಳೆ ಇವರು ಸಹಕರಿಸಲದ್ದಾರೆ. ಬಾಲಗೋಪಾಲರಾಗಿ ಕು|| ಭಾವನಾ ಮತ್ತು ಕು|| ವಿದ್ಯಾಶ್ರೀ ಇವರು ಅಭಿನಯಿಸಲಿದ್ದು, ಹಟ್ಟಿಯಂಗಡಿ ಶ್ರೀ ಆನಂದ ಶೆಟ್ಟಿಯವರು ನಿರೂಪಿಸಲಿದ್ದಾರೆ.

ಬನ್ನಿ. . . . .  ಕರ್ನಾಟಕದ ಯಕ್ಷಗಾನ ಕಲಾ ಪ್ರಕಾರವನ್ನು ದಾವಣಗೆರೆಯಲ್ಲಿ ವೈಭವೀಕರಿಸುವ ನಮ್ಮ ಪ್ರಯತ್ನದಲ್ಲಿ ತಮ್ಮ ಉಪಸ್ಥಿತಿಯೊಂದಿಗೆ ಸಹಕರಿಸಿ.
- ಭಾಸ್ಕರ್ ನಾಯಕ್, ನೀಲಾವರ.



TirukaShree Award


ಯೋಗತಜ್ಞ ಶ್ರೀ ಐ. ಶಶಿಕಾಂತ್ ಜೈನ್ರವರಿಗೆ
೨೦೧೨ ರ ಪ್ರತಿಷ್ಠಿತ ತಿರುಕಶ್ರೀ ಗೌರವ ಪುರಸ್ಕಾರ ಪ್ರದಾನ
ದಾವಣಗೆರೆ ಆ.

ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ ವತಿಯಿಂದ ಮಲ್ಲಾಡಿಹಳ್ಳಿಯ ನಿಷ್ಕಾಮಯೋಗಿ ಪರಮಪೂಜ್ಯ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿಯವರ ೧೬ನೇ ವಾರ್ಷಿಕ ಸಂಸ್ಮರಣೆ ನಿಮಿತ್ತ ಭಾರತೀಯ ಸನಾತನ ಯೋಗ ವಿದ್ಯೆಯ ಅನುಷ್ಠಾನ, ಶಿಕ್ಷಣ ಹಾಗೂ ಪ್ರಚಾರ ಪ್ರಸಾರಗಳಲ್ಲಿ ಅಮೂಲ್ಯ ಮೌಲ್ಯಯುತ ಸೇವೆಯನ್ನು ಸಲ್ಲಿಸುತ್ತಿರುವ ಮಹನೀಯರನ್ನು ಗೌರವಿಸಿ ಪುರಸ್ಕರಿಸುವ ನಿಟ್ಟಿನಲ್ಲಿ ೨೦೧೨ರ ಸಾಲಿನ ತಿರುಕಶ್ರೀ ಗೌರವ ಪುರಸ್ಕಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕರಾದ ಯೋಗತಜ್ಞ , ಸಂಶೋಧಕ ಶ್ರೀ ಐ. ಶಶಿಕಾಂತ್ ಜೈನ್ ಇವರು ಭಾಜನರಾಗಿರುತ್ತಾರೆ.

ಗೌರವ ಪುರಸ್ಕಾರವು ಗೌರವಧನ ರೂ. ೫೦೦೧/- (ಐದು ಸಾವಿರದ ಒಂದು ರೂಪಾಯಿ) ಶಾಲು ಮತ್ತು ಪುರಸ್ಕಾರ ಪತ್ರ, ಶ್ರೀಗಳ ವಿಶೇಷ ಫಲಕ, ಫಲಪುಷ್ಪ, ಗಂಧದ ಹಾರದೊಂದಿಗೆ ಗೌರವಿಸಲಾಗುವುದು

ತಿರುಕ ಶ್ರೀ ಗೌರವ ಪುರಸ್ಕಾರ ಸಮಾರಂಭವು ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿರುವ ಆರ್.ಹೆಚ್. ಗೀತಾಮಂದಿರದಲ್ಲಿ ದಿನಾಂಕ: ೧೧--೨೦೧೨ರ ಶನಿವಾರ ಸಂಜೆ ೫.೩೦ ಗಂಟೆಗೆ ನೆರವೇರಲಿದ್ದು ದಿವ್ಯ ಸಾನ್ನಿದ್ಯವನ್ನು ಪರಮಪೂಜ್ಯ ಶ್ರೀ ಶ್ರೀ ಶಿವಾನಂದ ಮಹಾಸ್ವಾಮಿಗಳು, ಶ್ರೀ ಜಡೆ ಸಿದ್ದೇಶ್ವರ ಶಿವಯೋಗಿಶ್ವರ ಶಾಂತಾಶ್ರಮ ದಾವಣಗೆರೆ,ಮುಖ್ಯ ಅತಿಥಿಗಳಾಗಿ ಜನತಾವಾಣಿ ಸುದ್ದಿ ಸಂಪಾದಕರಾದ ಎಂ.ಎಸ್ ಶಿವಶರಣಪ್ಪ,ಬಾಪೂಜಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಕಿರುವಾಡಿ ಗಿರಿಜಮ್ಮ,ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ|| ಬಿ.ಎಸ್ ನಾಗಪ್ರಕಾಶ್,ಪುರಸ್ಕಾರದ ಸೇವಾಕರ್ತ ವೀರೇಶ್ ಬೆಳಕೇರಿ ಹಾಗೂ ಅಂತರ್ರಾಷ್ಟೀಯ ಯೋಗ ಪ್ರಶಸ್ತಿ ಪುರಸ್ಕೃತರಾದ ಡಾ|| ರಾಘವೇಂದ್ರ ಗುರೂಜಿ, ಇವರ ಉಪಸ್ಥಿತಿಯಲ್ಲಿ ನೆರವೇರಲಿದ್ದು ಈ ಸಂದರ್ಭದಲ್ಲಿ ಮಂದಾರ್ತಿ ಮೇಳದ ಪ್ರಸಿದ್ದ ಬಣ್ಣದ ವೇಷದ ಕಲಾವಿದರಾದ ಶ್ರೀ ಜಗನ್ನಾಥ ಆಚಾರಿ, ಯಳ್ಳಂಪಳ್ಳಿ ಹಾಗೂ ಶ್ರೀ ಅಮೃತೇಶ್ವರಿ ಮೇಳದ ಪ್ರಸಿದ್ದ ಹಾಸ್ಯ ಕಲಾವಿದರಾದ ಶ್ರೀ ಲಕ್ಷ್ಮಣ ಭಂಡಾರಿ ಹೊಸಂಗಡಿ ಇವರಿಂದ ಯಕ್ಷಗಾನ ನೃತ್ಯ ಕಲಾ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇತೀ
ಭಗವತ್ತ್ಸೇವೆಯಲ್ಲಿ
ಯೋಗಾಚಾರ್ಯ ಶ್ರೀ ಡಾ||  ರಾಘವೇಂದ್ರ ಗುರೂಜಿ




Free Yoga Camp Inaugration


ಉಚಿತ ಚೈತನ್ಯ ಯೋಗ ಶಿಬಿರ ಉದ್ಘಾಟನೆ

ಮನಸ್ಸಿನ ಹತೋಟಿ ಹಾಗೂ ಏಕಾಗ್ರತೆಗಾಗಿ ಯೋಗಾಭ್ಯಾಸ ರೂಢಿಸಿಕೊಳ್ಳಿ
                                                                        -        ಪೂಜ್ಯ ಶ್ರೀ ಶ್ರೀ ಪರಮೇಶ್ವರ ಸ್ವಾಮೀಜಿ

ನಗರದ ಆರ್.ಹೆಚ್. ಗೀತಾ ಮಂದಿರದಲ್ಲಿ ಮಲ್ಲಾಡಿಹಳ್ಳಿ ಶ್ರೀಗಳ ಸಂಸ್ಮರಣೆ ನಿಮಿತ್ತ ೧೬ನೇ ವಾರ್ಷಿಕ ಯೋಗ ಶಿಬಿರದ
ಉದ್ಘಾಟನೆಯನ್ನು ಪೂಜ್ಯ ಶ್ರೀ ಪರಮೇಶ್ವರ ಸ್ವಾಮಿಜಿ ನೆರವೇರಿಸಿದರು.  ಚಿತ್ರದಲ್ಲಿ ವಿದ್ಯಾ ಶ್ರೀ ಏಕಬೋಟೆ, 
 ಅನೀಲ್‌ಕುಮಾರ್, ಟಿ. ಜೈಪ್ರಕಾಶ್, ಡಾ. ಯು. ಸಿದ್ದೇಶಿ, ಕಾಸಲ್ ಎಸ್.  ವಿಠಲ್, ಡಾ|| ಜಿ.ಗುರುಪ್ರಸಾದ್,
ಶಂಭುಲಿಂಗಯ್ಯ ಹಿರೇಮಠ್, ಜಯಶೀಲ್ ಹಿರೇಮಠ್,ಮಂಜುನಾಥ್ ಸಿ. ಕಣಕುಪ್ಪಿ, ಇದ್ದಾರೆ. 

ದಾವಣಗೆರೆ. .                           

        ನಾವು ಮನಸ್ಸಿನ ಗುಲಾಮರಾಗಬಾರದು. ಮನಸ್ಸು ನಮ್ಮ ಹತೋಟಿಯಲ್ಲಿರಬೇಕು. ಮನಸ್ಸು ಹತೋಟಿಯಲ್ಲಿರಬೇಕಾದರೆ ಏಕಾಗ್ರತೆ ಬೇಕು. ಮನಸ್ಸಿನ ಹತೋಟಿ ಹಾಗೂ ಏಕಾಗ್ರತೆ ಸಾಧಿಸಬೇಕಾದರೆ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ನಗರ ಸಮೀಪದ ಯರಗುಂಟೆ, ಅಶೋಕ ನಗರದಲ್ಲಿರುವ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದ ಪೂಜ್ಯ ಶ್ರೀ ಶ್ರೀ ಪರಮೇಶ್ವರ ಸ್ವಾಮೀಜಿ ತಿಳಿಸಿದರು.

        ಶ್ರೀಗಳು ಇಂದು ಬೆಳಿಗ್ಗೆ ಆದರ್ಶ ಯೋಗ ಪ್ರತಿಷ್ಠಾನ (ರಿ). ದಾವಣಗೆರೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಸಂಸ್ಮರಣೆ ನಿಮಿತ್ತ ೧೬ನೇ ವಾರ್ಷಿಕ ಉಚಿತ ಚೈತನ್ಯ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ದಿನದ ೨೪ ತಾಸುಗಳಲ್ಲಿ ೧೨ ಗಂಟೆ ಕಾಯಕ, ೬ ತಾಸು ನಿದ್ರೆ, ಇನ್ನುಳಿದ ೬ ತಾಸುಗಳಲ್ಲಿ ಪೂಜೆ ಪುನಸ್ಕಾರ, ಅಧ್ಯಯನ ಮಕ್ಕಳ ಹಾಗೂ ಕುಟುಂಬದವರೊಂದಿಗೆ ಪ್ರೀತಿ ವಿಶ್ವಾಸಗಳಿಂದ ಇದ್ದರೆ ಮನಸ್ಸು ಹಗೂರವಾಗಿ ಆರೋಗ್ಯವು ಉತ್ತಮ ರೀತಿಯಲ್ಲಿರುತ್ತದೆ. ಜಪ, ದ್ಯಾನ, ಯೋಗ ಇವುಗಳ ಸಾಧನೆಯಿಂದ ನಮ್ಮ ಆತ್ಮದಲ್ಲಿಯೇ ಪರಮಾತ್ಮನನ್ನು ಕಾಣಲು ಸಾಧ್ಯ. ಮಲ್ಲಾಡಿಹಳ್ಳಿ ಶ್ರೀಗಳು ಮಠ ಸ್ಥಾಪಿಸುವ ಪೂರ್ವದಲ್ಲಿ ಪ್ರತೀ ಮನೆಯ ಅಂಗಳನ್ನು ಗುಡಿಸಿ ಸಗಣಿ ಸಾರಿಸಿ ರಂಗೋಲಿಯನ್ನು ಹಾಕಿ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಹೊಸ ಆಂದೋಲನವನ್ನೇ ಮಾಡಿದ ಮಹಾಯೋಗಿ, ಇವರ ಸಂಸ್ಮರಣೆ ಆದರ್ಶ ಹಾಗೂ ಅನುಕರಣೀಯ ಎಂದರು.

        ಮುಖ್ಯ ಅತಿಥಿಗಳಾಗಿ ಕಾಸಲ್ ಎಸ್. ವಿಠ್ಠಲ್ ಮಾತನಾಡಿ ಯೋಗ ವಿದ್ಯೆ ಅತ್ಯಂತ ಶ್ರೇಷ್ಠವಾದುದು. ಇಂತಹ ಶಿಬಿರಗಳು ಹೆಚ್ಚೆಚ್ಚು ನಡೆಯಬೇಕು ಎಂದರು. ಜಿಲ್ಲಾ ಆಯುಷ್ ಅಧಿಕಾರಿ ಡಾ|| ಯು.ಸಿದ್ದೇಶಿ ಸರ್ಕಾರ ಮಾಡಬೇಕಾದ ಕೆಲಸ ಇಂದು ಡಾ|| ರಾಘವೇಂದ್ರ ಗುರೂಜಿಯವರು ಮಾಡುತ್ತಿದ್ದಾರೆ. ಮನಸ್ಸು ಮತ್ತು ದೇಹದ ಸಮತೋಲನ ಸಾಧಿಸಲು ಯೋಗ ಅತ್ಯಂತ ಸಹಕಾರಿ ಎಂದರು. ಡಾ|| ಜಿ. ಗುರು ಪ್ರಸಾದ್ ೨೦೨೦ ಕ್ಕೆ ಭಾರತ ದೇಶ ಮಧುಮೇಹದ ರಾಜಧಾನಿಯಾಗಲಿದೆ. ಒತ್ತಡದ ತೀವ್ರತೆ ಹೆಚ್ಚಾಗಿ ಮನುಷ್ಯ ಸಕ್ಕರೆ ಖಾಯಿಲೆ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಯೋಗದಿಂದ ರೋಗಮುಕ್ತವಾಗಲು ಸಾಧ್ಯ ಎಂದರು. ಆರೋಗ್ಯ ಸಲಹೆಗಾರ ಟಿ. ಜೈ ಪ್ರಕಾಶ್ ಯೋಗಾಭ್ಯಾಸದಿಂದ ಶರೀರದ ಎಲ್ಲಾ ಅಂಗಾಂಗಗಳ ಮೇಲೆ ಉತ್ತಮ ಪರಿಣಾಮವನ್ನು ಬೀರಿ ರಕ್ತ ಸಂಚಾರವು ಉತ್ತಮ ಗೊಂಡಾಗ ಆರೋಗ್ಯವು ಲಭಿಸುತ್ತದೆ ಎಂದರು.

        ಪ್ರಾರಂಭದಲ್ಲಿ ಕುಮಾರಿ ವಿದ್ಯಾಶ್ರೀ ಏಕಬೋಟೆ ಪ್ರಾರ್ಥಿಸಿದರು. ಯೋಗ ಶಿಕ್ಷಕ ಶಂಭುಲಿಂಗಯ್ಯ ಹಿರೇಮಠ್ ಎಲ್ಲರನ್ನು ಸ್ವಾಗತಿಸಿದರು. ಜಯಶೀಲ್ ಹಿರೇಮಠ್ ಪ್ರಾಶ್ತಾವಿಕ ನುಡಿ ನಮನ ಸಲ್ಲಿಸಿದರು ಅನೀಲ್ಕುಮಾರ್ ರಾಯ್ಕರ್ ಶಿಬಿರದ ಮಾಹಿತಿ ನೀಡಿದರು. ಮಂಜುನಾಥ್ ಸಿ. ಕಣಕುಪ್ಪಿ ಎಲ್ಲರನ್ನು ವಂದಿಸಿರು. ಯೋಗಶಿಕ್ಷಕ ವಿ.ಲಲಿತ್ ಕುಮಾರ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು. ಕೆ.ಕೆ. ಚಿದಾನಂದ ಸಹಕರಿಸಿದರು. ಕೊನೆಯಲ್ಲಿ ಡಾ|| ರಾಘವೇಂದ್ರ ಗುರೂಜಿ ಶ್ರೀ ಗುರು ಭಜನೆಯೊಂದಿಗೆ ಶಾಂತಿ ಮಂತ್ರವನ್ನು ಹೇಳಿಕೊಟ್ಟರು. ಯೋಗಶಿಬಿರವು ಆಗಸ್ಟ್ ೧೧ ರ ವರೆಗೆ ನಡೆಯಲಿದೆ.

Monday, July 30, 2012

Free camp Tomorrow


ನಗರದಲ್ಲಿ ನಾಳೆ
ಉಚಿತ ಚೈತನ್ಯ ಯೋಗ ಶಿಬಿರ ಉದ್ಘಾಟನಾ ಸಮಾರಂಭ


ದಾವಣಗೆರೆ ಆ.೩೦
ಆದರ್ಶ ಯೋಗ ಪ್ರತಿಷ್ಠಾನ (ರಿ.)ದಾವಣಗೆರೆ ವತಿಯಿಂದ ಮಲ್ಲಾಡಿಹಳ್ಳಿ ಪರಮಪೂಜ್ಯ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿ ಸಂಸ್ಮರಣೆ ನಿಮಿತ್ತ ೧೬ನೇ ವಾರ್ಷಿಕ ಉಚಿತ ಚೈತನ್ಯ ಯೋಗ ಶಿಬಿರವು ನಗರದ ಪಿ.ಬಿ ರಸ್ತೆಯಲ್ಲಿರುವ ಆರ್.ಹೆಚ್. ಗೀತಾಮಂದಿರದಲ್ಲಿ ೧-೮-೨೦೧೨ರ ಬುಧವಾರ ಬೆಳಿಗ್ಗೆ ೬:೦೦ ಘಂಟೆಗೆ ಉದ್ಘಾಟನೆಗೊಳ್ಳಲಿದೆ.
ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದ ಪೂಜ್ಯ ಶ್ರೀ ಶ್ರೀ ಪರಮೇಶ್ವರ ಸ್ವಾಮೀಜಿ ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ಅನಾಥ ಸೇವಾಶ್ರಮ ಮಲ್ಲಾಡಿಹಳ್ಳಿ ಟ್ರಸ್ಟಿಗಳಾದ ಶ್ರೀ ಕಾಸಲ್ ಎಸ್.ವಿಠ್ಠಲ್,ಜಿಲ್ಲಾ ಆಯುಷ್ ಅಧಿಕಾರಿ ಡಾ|| ಯು. ಸಿದ್ದೇಶಿ,ಅಕಾಡೆಮಿ ಆಫ್ ಯೋಗಾ ಅಂಡ್ ಹೆಲ್ತ್‌ಕೇರ್‌ನ ಶ್ರೀ ಟಿ.ಜೈ ಪ್ರಕಾಶ್,ಬಾಪೂಜಿ ಮಕ್ಕಳ ಆಸ್ಪತ್ರೆಯ ನವಜಾತ ಶಿಶು ತಜ್ಞ ಡಾ|| ಜಿ.ಗುರುಪ್ರಸಾದ್ ಹಾಗು ಡಾ|| ರಾಘವೇಂದ್ರ ಗುರೂಜಿ ಉಪಸ್ಥಿತರಿರುವರು.ಶಿಬಿರಕ್ಕೆ ಸೇರಲಿಚ್ಚಿಸುವ ಆಸಕ್ತರು ಆಗಮಿಸಬೇಕಾಗಿ ಕೋರಲಾಗಿದೆ.